ಕಲಬುರಗಿ: ಈ ಕಾರ್ಯಕ್ರಮದ ಉದ್ಘಾಟಕರಾಗಿ ಮನೋಜ್ ಕುಮಾರ್ ಗಡಬಳಿ ಅಧೀಕ್ಷಕ ಅಭಿಯಂತರರು ಬ್ಯಾಟ ಮಾಡುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು.
ಹೆಚ್ಚು ಹೆಚ್ಚು ಜವ್ದಾದಾರಿ ಇದ್ದು ಕಛೇರಿಯ ಕೆಲಸಗಳ ಮದ್ಯದಲ್ಲಿ ಮಾನಸಿಕ ಒತ್ತಡ ಕಡಿಮೆಮಾಡಲು ಕ್ರೀಡಾ ಚಟುವಟಿಕೆ ಅವಶ್ಯಕ ಎಂದು ಪಂದ್ಯಾವಳಿಗೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ನಾಲ್ಕು ಪಂದ್ಯಗಳ ಕ್ಯಾಪ್ಟನ್ ಗಳಿಗೂ ಅಭಿನಂದಿಸಿ ಶುಭಕೊರಿದರು.
26ನೇ ಜನೆವರಿ ಗಣರಾಜ್ಯೋತ್ಸವ ಅಂಗವಾಗಿ ಕಲ್ಯಾಣ ಕರ್ನಾಟಕ. ಲೋಕೋಪಯೋಗಿ ನೌಕರ ಸಂಘ ಹಾಗೂ ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘ ಕಲ್ಬುರ್ಗಿ ಸಂಯುಕ್ತ ಆಶ್ರಯದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಅದರಲ್ಲಿ ಕ್ರಿಕೆಟ್ ಅನ್ನು ನೂತನ ವಿದ್ಯಾಲಯ ಮೈದಾನದಲ್ಲಿ ಆಡಿಸಲಾಯಿತು.
ಮಲ್ಲಿಕಾರ್ಜುನ್ ಎಚ್ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ವಿಭಾಗ ಕಲ್ಬುರ್ಗಿ ವೆಂಕಬಚಾರ್ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ವರುಣೇಕರ್ ಕಾರ್ಯನಿರ್ವಾಹಕ ಅಭಿಯಂತರು ಕಂಠಪ್ಪ ನರಸಪ್ಪ ಸಾಯಕ ಕಾರ್ಯನಿರ್ವಾಹಕ ಅಭಿಯಂತರು ಶಶಿಧರ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಇವರುಗಳು ಅಥಿತಿಗಳಾಗಿ ಆಗಮಿಸಿದ್ದರು.
ಕಾಳಪ್ಪ ಅಧ್ಯಕ್ಷರು ಕರ್ನಾಟಕ ಇಂಜಿನಿಯರಿಂಗ್ ಸೇವಾ ಸಂಘ, ಶರಣ್ ರಾಜ್ ಚಪ್ಪರ ಬಂದಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘ ಗಿರಿಜಾ ದೇವಿ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಲೋಕೋಪಯೋಗಿ ಮಹಿಳಾ ಘಟಕ ಹಾಗೂ ಪದಾಧಿಕಾರಿಗಳು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.