ಶಾಲಾ ಮಕ್ಕಳ ಮೇಲೆ ಸಾಂಬರ ಬಿದ್ದ ಘಟನೆ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಡಿಎಸ್‍ಎಸ್ ಮನವಿ

0
13

ಸುರಪುರ:ತಾಲೂಕಿನ ಮುನೀರ ಬೊಮ್ಮನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 27 ರಂದು ಮಧ್ಹ್ಯಾನದ ಬಿಸಿಯೂಟದ ಸಂದರ್ಭದಲ್ಲಿ ಅಲ್ಲಿದ್ದ ಶಾಲಾ ಮಕ್ಕಳ ಮೇಲೆ ಸಾಂಬರ್ ಬಿದ್ದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ತಾಲೂಕು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಮುನೀರ ಬೊಮ್ಮನಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿನ ಮಕ್ಕಳ ಮೇಲೆ ಸಾಂಬರ್ ಬಿದ್ದ ಘಟನೆ ನಡೆದು ಒಂದು ತಿಂಗಳಾಗುತ್ತಿದೆ,ಆದರೆ ಈವರೆಗೆ ತಪ್ಪಿಸ್ಥರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.ಇದರ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೂ ಮತ್ತು ಜಿಲ್ಲಾ ಪಂಚಾಯತಿ ಸಿಇಓ ಅವರಿಗೂ ಮನವಿ ಸಲ್ಲಿಸಲಾಗಿದೆ.ಆದರೂ ಕ್ರಮ ಕೈಗೊಂಡಿಲ್ಲ,ಕೂಡಲೇ ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳದಿದ್ದಲ್ಲಿ ಇದೇ 25ನೇ ತಾರೀಖು ತಾಲೂಕು ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

Contact Your\'s Advertisement; 9902492681

ನಂತರ ತಾಲೂಕು ಪಂಚಾಯತಿ ಇಓ ಅವರು ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರವಿಚಂದ್ರ ಬಿ ಬೊಮ್ಮನಹಳ್ಳಿ, ರಾಮಣ್ಣ ಶಳ್ಳಗಿ,ಮಹೇಶ ಯಾದಗಿರಿಕರ್ ತಾಲೂಕು ಸಂಚಾಲಕರು ಆದ ಬಸವರಾಜ ಶೇಳ್ಳಗಿ ತಾಲೂಕು ಮುಖಂಡರು ಆದ ಹುಲಗಪ್ಪ ಶೇಳ್ಳಗಿ ಮಲ್ಲೇಶ ಶಳ್ಳಗಿ, ಖಾಜಾ ಹುಸೇನೀ ಗುಡುಗುಂಟಿ, ಗಾಯಗೊಂಡ ವಿದ್ಯಾರ್ಥಿನಿ ಸ್ವಾತಿ ತಂದೆ ಸಾಯಬಣ್ಣ ನೀರಲಗಿ, ಮನೋಹರ ನೀರಲಗಿ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ್ ಕಂಬಾರ,ರೇವಣಸಿದ್ಧ ಗ್ರಾಂ ಪಂಚಾಯತ್ ಸದಸ್ಯರು, ಮರೆಪ್ಪ ಕಾಂಗ್ರೆಸ್ ಕಕ್ಕೇರಾ, ಪರಮಣ್ಣ ಕಾಂಗ್ರೆಸ ಕಕ್ಕೇರಾ, ಮಲ್ಲು ಬೇವಿನಳ, ಕಲಾ ಮಂಡಳಿ ಜಿಲ್ಲಾ ಸಂಚಾಲಕ ಜೇಟ್ಟೆಪ್ಪ ನಾಗರಾಳ, ಶರಣು ಆರ್ ಬಸ್ಟ್ಯಾಳ ಬೊಮ್ಮನಹಳ್ಳಿ, ಬಂಣ್ಣೆಪ್ಪ ಕೊನಾಳ, ತಿಪ್ಪಣ ಭಂಡಾರಿ ಶೇಳ್ಳಗಿ, ಶ್ರೀನಿವಾಸ ಅಗ್ನಿ ಕುಮಾರ್ ಸಿಂದಗಿರಿ ಇನ್ನಿತರ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here