ಬಡತನ ಎಂಬ ಪೀಡೆ ತೊಲಗಲು ಶಿಕ್ಷಣ ಒಂದೇ ಅಸ್ತ್ರ: ಸಾಬಣ್ಣ ತಳವಾರ

0
10

ಶಹಾಬಾದ:ಜಗತ್ತಿನಲ್ಲಿ ಬಡತನ ಎಂಬ ಪೀಡೆ ತೊಲಗಬೇಕಾದರೆ ಶಿಕ್ಷಣ ಒಂದೇ ಅಸ್ತ್ರ ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಹೇಳಿದರು.

ಅವರು ಸೋಮವಾರ ಭಂಕೂರ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬಡತನ ಮತ್ತು ಬಡ ಕುಟುಂಬ, ಬಡತನದಿಂದ ಹೊರಬರಬೇಕಾದರೆ ಶಿಕ್ಷಣ ಪಡೆದರೇ ಮಾತ್ರ ಹೊರಬರಬಹುದು. ಇನ್ಯಾವುದೇ ಮೂಲವಿಲ್ಲ. ಶಿಕ್ಷಣ ಎಂಬುದೇ ಮುಖ್ಯವಾಗಿದ್ದು, ಅದರಿಂದ ಬಡತನವನ್ನು ಮುಕ್ತ ಮಾಡಬಹುದು.ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಶಿಕ್ಷಣ ಪಡೆಯಬೇಕಾದರೆ ಎಲ್ಲಿಲ್ಲದ ಸಂಕಷ್ಟ ಪಡೆದರು.ಪಡಬಾರದ ಅವಮಾನ ಪಡೆದು ಈ ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಿ ನಿಂತರು.ಇಂದು ಅವರನ್ನು ಸ್ಮರಿಸಬೇಕು. ಇಲ್ಲಿ ಓದುತ್ತಿರುವ ಮಕ್ಕಳು ಬಡವರು. ಈ ಮಕ್ಕಳಿಂದ ಸಂಬಳ ಪಡೆಯುವವರ ಶಿಕ್ಷಕರು ಹಾಗೂ ಅಧಿಕಾರಿಗಳು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ ಆಗಬೇಕೆಂಬುದು ಆಸೆಯಿದೆ.ಆದರೆ ಈ ಬಡ ಮಕ್ಕಳು ಸಹ ಡಾಕ್ಟರ್ ,ಇಂಜಿನಿಯರ್ ಆಗಬೇಕಲ್ಲ ಎಂಬ ಮನೋಭಾವನೆ ತಮ್ಮಲ್ಲಿ ಬರಬೇಕು.ಆಗ ಉತ್ತಮ ವಾತಾವರಣ ಮೂಡುತ್ತದೆ .ಅಲ್ಲದೇ ಶಾಲೆಯಲ್ಲಿ ಮೂಲಸೌಲಭ್ಯವಿಲ್ಲದ ಕಾರಣ ನನ್ನ ಅನುದಾನದಲ್ಲಿ ಈ ಶಾಲೆಗೆ ಸುಮಾರು 42 ಲಕ್ಷ ರೂ.ಅನುದಾನ ನೀಡಿದ್ದೆನೆ.ಕಾರಣ ಈ ಶಾಲೆ ಮಾದರಿ ಶಾಲೆ ಆಗಬೇಕೆಂಬುದು ನಮ್ಮ ಬಯಕೆಯಿದೆ.ಆದರೆ ಇಂದು ಈ ಶಾಲೆಯ ಸ್ಥಿತಿ ನೋಡಿದರೆ ದು:ಖವಾಗುತ್ತದೆ.ಈ ಹಿಂದೆ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಇಲ್ಲಿ ಓದುತ್ತಿದ್ದರು.ಆದರೆ ಇಂದು ಇದೇ ಗ್ರಾಮದ ಮಕ್ಕಳು ಓದಲು ಮುಂದೆ ಬರುತ್ತಿಲ್ಲ.ಇಲ್ಲಿನ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕಿದೆ.ಆ ನಿಟ್ಟಿನಲ್ಲಿ ಗ್ರಾಮದ ಜನರು, ಶಿಕ್ಷಕರು ಹಾಗೂ ಅಧಿಕಾರಿಗಳು ಮುತುವರ್ಜಿಸಬೇಕೆಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್, ಖಾಸಗಿ ಶಾಲೆಗಿರುವ ಒಲವು ಸರಕಾರಿ ಶಾಲೆಯ ಮೇಲೆ ಪಾಲಕರು ತೋರಬೇಕಿದೆ. ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಅವರು ಇದೇ ಶಾಲೆಯಲ್ಲಿ ಕಲಿತು ಉನ್ನತ ಸ್ಥಾನವನ್ನು ಪಡೆದಿದ್ದಾರೆ.ಅಲ್ಲದೇ ಕಲಿತ ಶಾಲೆಯನ್ನು ದತ್ತು ಪಡೆದುಕೊಂಡು ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಾಗಿರುವುದು ಸಂತೋಷ ತಂದಿದೆ ಎಂದರು.
ಅಕ್ಷರ ದಾಸೋಹದ ಸಹಾಯಕ ನಿದೇರ್ಶಕ ಪ್ರಕಾಶ ನಾಯಿಕೊಡಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಭೀಮಬಾಯಿ ಭಜಂತ್ರಿ, ಶಿಕ್ಷಣ ಸಂಯೋಜಕ ಶ್ರೀಧರ ರಾಠೋಡ, ಸಿಆರ್‍ಸಿ ಮರೆಪ್ಪ ಭಜಂತ್ರಿ, ಮುಖ್ಯಗುರುಮಾತೆ ಮಾರ್ತಾ.ಸಿ, ಗ್ರಾಪಂ ಸದಸ್ಯರು,ಪಿಡಿಓ ಹಾಗೂ ಗ್ರಾಮಸ್ಥರು ಇದ್ದರು.

ಶಿಕ್ಷಕಿ ಕಲಾವತಿ ನಿರೂಪಿಸಿದರು, ಶಿಕ್ಷಕ ಮಹಾಂತೇಶ ಸ್ವಾಗತಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here