ಭಾರತದ ಸಂವಿಧಾನ ಜಗತ್ತಿನಲ್ಲೇ ದೊಡ್ಡದು; ಪ್ರೊ. ಅಲಿ ರಜಾ ಮೂಸ್ವಿ

0
38

ಕಲಬುರಗಿ: ಭಾರತ ವಿಶ್ವದಲ್ಲಿಯೇ ಖ್ಯಾತಿಯನ್ನು ಹೊಂದಿದೆ. ನಮ್ಮ ಸಂವಿಧಾನ ಇಡೀ ಜಗತ್ತಿನಲ್ಲೇ ದೊಡ್ಡದು. ಸಂವಿಧಾನದ ಆಶಯಗಳನ್ನು ಪಾಲಿಸಿದಲ್ಲಿ ದೇಶದ ಏಳಿಗೆ ಖಚಿತ. ಬದಲಾವಣೆ ಪ್ರಕೃತಿಯ ನಿಯಮವಾಗಿದೆ. ಬದಲಾವಣೆಯಿಂದ ಪ್ರಗತಿ ಸಾಧ್ಯ. ಭಾರತದ ಪ್ರಗತಿ ಕೇವಲ ಸರ್ಕಾರದ ಹೊಣೆಯಲ್ಲ. ಪ್ರತಿ ಪ್ರಜೆಯೂ ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದು ಕೆಬಿಎನ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಹೇಳಿದರು.

ನಗರದ ಕೆಬಿಎನ್ ವಿವಿಯಲ್ಲಿ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವದ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶ ಸ್ವಾತಂತ್ರ್ಯ ಪಡೆದ ನಂತರ ಸಾಕಷ್ಟು ಪ್ರಗತಿ ಹೊಂದಿದೆ. ಆದರೂ ಸಾಧಿಸುವುದು ಇನ್ನೂ ಬಹಳಷ್ಟಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಪ್ರಸಿದ್ಧಿ ಮಾಡಲು ನಾವೆಲ್ಲ ಜೊತೆಯಾಗಿ ಶ್ರಮಿಸೋಣ ಎಂದರು.

ಡಾ. ಅಲಿ ರಜಾ ಮೂಸ್ವಿ ಮಾತನಾಡುತ್ತˌ ದೇಶ ಸ್ವಾತಂತ್ರ್ಯ ಪಡೆದ ನಂತರ ಪ್ರಜೆಗಳ ಜವಾಬ್ದಾರಿ ಹೆಚ್ಚಿದೆ. ರಾಷ್ಟ್ರ ಕಟ್ಟುವಲ್ಲಿ ಎಲ್ಲ ಪ್ರಜೆಗಳು ಭಾಗವಹಿಸಬೇಕು. ಶಿಕ್ಷಣ ಮಾಹಿತಿ ಮತ್ತು ಸರಿಯಾದ ನಡುವಳಿಕೆಯಿಂದ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬಹುದು. ನಮ್ಮ ಖಾಜಾ ಬಂದನಾವಾಜ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಭಾರತದ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ನಿರತವಾಗಿದೆ ಎಂದರು.

ಕೆಬಿಎನ್ ವಿವಿಯ ಪರಮ ಧ್ಯೇಯವೆ ಮನುಷ್ಯತ್ವವನ್ನು ಕಲಿಸುವುದು.ಸಯ್ಯದ್ ಅಕ್ಬರ ಹುಸೇನಿ ಶಾಲೆಯ ಎನ್ ಸಿಸಿ ಘಟಕದ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು.

ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇಂಗ್ಲೀಷ್ ಹಾಗೂ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರು ಕಾರ್ಯಕ್ರಮ ನಿರೂಪಿಸಿದರ

ಈ ಕಾರ್ಯಕ್ರಮದಲ್ಲಿ ಕುಲಸಚಿವೆ ಡಾ.ರುಕ್ಸಾರ ಫಾತಿಮಾ, ವೈದ್ಯಕೀಯ ನಿಕಾಯದ ಡೀನ ಡಾ ಸಿದ್ದೇಶ್ ಸಿರವಾರ್ , ಕಲಾ ನಿಕಾಯದ ಡೀನ್ ಡಾ. ನಿಶಾತ್ ಆರೀಫ್ ಹುಸೇನಿ, ಕೆಬಿಎನ್ ಅಡಿ ಬರುವ ಎಲ್ಲ ವಿದ್ಯಾ ಸಂಸ್ಥೆಗಳ ಸಮಸ್ತ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೆಬಿಎನ್ ಕಲಾ ಭಾಷಾ ನಿಕಾಯ ಮತ್ತು ಶಿಕ್ಷಣ ನಿಕಾಯದ ವಿದ್ಯಾರ್ಥಿನಿಯರು ಹಾಗೂ ಸಯ್ಯದ ಅಕ್ಬರ ಹುಸೇನಿ ಶಾಲೆಯ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಕಲಾ ಮನವಿಕತೆ ಹಾಗೂ ಸಮಾಜ ವಿಜ್ಞಾನ ನಿಕಾಯದ ವಿದ್ಯಾರ್ಥಿನಿಯರು ಸ್ಕಿಟ್ ಪ್ರಸ್ತುತ ಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here