ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿದ್ಯಾರ್ಥಿಗಳಿಂದ ಮತ್ತೊಂದು ಗರಿ

0
10

ಕಲಬುರಗಿ; ಏಷ್ಯನ್ ಪೇಂಟ್ಸ್ ಲಿಮಿಟೆಡ್‍ನ ಪ್ಲೇಸ್‍ಮೆಂಟ್ ಡ್ರೈವ್‍ನಲ್ಲಿ ವರ್ಷಕ್ಕೆ 4 ಲಕ್ಷ ರೂಪಾಯಿಗಳ ವೇರಿಯಬಲ್ ಪ್ಯಾಕೇಜ್ ಜೊತೆಗೆ ವರ್ಷಕ್ಕೆ 7.5 ಲಕ್ಷ ರೂಪಾಯಿಗಳ ವೇತನ ಪ್ಯಾಕೇಜ್‍ನೊಂದಿಗೆ ಯಶಸ್ವಿಯಾಗಿ ಸ್ಥಾನ ಪಡೆಯುವ ಮೂಲಕ ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಗೌರವ ತಂದು ಕೊಟ್ಟಿದ್ದಾರೆ.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ವ್ಯವಹಾರ ಅಧ್ಯಯನ ನಿಕಾಯದ ಡೀನ್ ಡಾ.ಎಸ್.ಎಚ್.ಹೊನ್ನಳ್ಳಿ ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿನ ವ್ಯವಹಾರ ಅಧ್ಯಯನ ನಿಕಾಯದ ಎಂಬಿಎ ವಿಭಾಗದ 3ನೇ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಿಂಗಳಿಗೆ ಸರಿಸುಮಾರು 65,000 ರೂ. ಜೊತೆಗೆ ವೇರಿಯಬಲ್ ಭತ್ಯೆಯೊಂದಿಗೆ ವರ್ಷಕ್ಕೆ ಸುಮಾರು 4 ಲಕ್ಷ ರೂ. ನಿಗದಿತ ವೇತನ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ವ್ಯವಹಾರ ಅಧ್ಯಯನ ನಿಕಾಯದ ಪ್ಲೇಸ್‍ಮೆಂಟ್ ಸಂಯೋಜಕರಾದ ಪೆÇ್ರ.ಶ್ರುತಿ ಮಾಲಿಪಾಟೀಲ್ ಮತ್ತು ಪೆÇ್ರ.ಶರಣ ರೆಡ್ಡಿ ಮಾತನಾಡಿ, ಎಂಬಿಎ ವಿಭಾಗದ ಸುಮಾರು 50 ವಿದ್ಯಾರ್ಥಿಗಳು ಪ್ಲೇಸ್‍ಮೆಂಟ್ ಡ್ರೈವ್‍ನಲ್ಲಿ ಭಾಗವಹಿಸಿದ್ದರು ಮತ್ತು ಏಷ್ಯನ್ ಪೇಂಟ್ಸ್‍ನ ನೇಮಕಾತಿ ತಂಡದೊಂದಿಗೆ ಮೂರು ಸುತ್ತಿನ ಸಂದರ್ಶನ ಹಾಗೂ ಸಂವಾದದ ನಂತರ, ಏಷ್ಯನ್ ಪೇಂಟ್ಸ್‍ನಿಂದ ಲಾಭದಾಯಕ ಕೊಡುಗೆಯನ್ನು ಪಡೆಯಲು 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಮುಗಿದ ಕೂಡಲೇ, ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಾದ ಅಭಿμÉೀಕ್ ದೇಗಲಮಡಿ, ಆಕಾಶ್ ಬಿ ಪವಾಡಶೆಟ್ಟಿ, ನೀಲಾಂಬಿಕಾ ಜಿ ಎಂ, ದಯಾನಂದಯ್ಯ ವಿ, ಕೆ ಸಾಗರ್ ರೆಡ್ಡಿ, ಮೊಹಮ್ಮದ್ ಅಥರ್, ಮೊಹಮ್ಮದ್ ಅಸ್ರ್ಲಾನ್, ಪವನಕುಮಾರ್ ಆರ್, ರಾಹುಲ್ ಎಸ್, ಸಚಿನ್ ಢಾಗೆ, ಮತ್ತು ವರುಣ್ ನಂದೂರ್ ಯಶಸ್ವಿಯಾಗಿ ಆಯ್ಕೆಯಾಗಿದ್ದಾರೆ.

ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಅವ್ವಾಜಿ ಅವರು ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಾಗಿ ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಶಿಕ್ಷಕ ವೃಂದದವರು ಮಾಡಿದ ಪ್ರಯತ್ನಗಳಿಗಾಗಿ ಅಭಿನಂದಿಸಿದರು. ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ ವಿ.ನಿಷ್ಠಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಅವರು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here