“ಇಂಟೆಲ್ ಉನ್ನತಿ ಡೇಟಾ ಸೆಂಟ್ರಿಕ್ ಲ್ಯಾಬ್” ಸ್ಥಾಪಿಸಿರುವ ಶರಣಬಸವ ವಿಶ್ವವಿದ್ಯಾಲಯ

0
13

ಕಲಬುರಗಿ; ದೇಶದ ಅತ್ಯಂತ ಕಿರಿಯ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಶರಣಬಸವ ವಿಶ್ವವಿದ್ಯಾಲಯವು, ಹೆಚ್ಚಿನ ಕೈಗಾರಿಕೆ-ಶೈಕ್ಷಣಿಕ ಸಂಬಂಧಕ್ಕಾಗಿ ಹೊಸ ಶಿಕ್ಷಣ ನೀತಿಯ ಉದ್ದೇಶಗಳಿಗೆ ಉನ್ನತ ಮಟ್ಟದ ಇಂಟೆಲ್ ಉನ್ನತಿ ಡೇಟಾ ಸೆಂಟ್ರಿಕ್ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ನಾವೀನ್ಯತೆಗನುಗುಣವಾಗಿ ಮತ್ತು ಸಂಶೋಧನೆಗೆ ಹೆಚ್ಚಿನ ಗಮನವನ್ನು ಒದಗಿಸುವ ದೇಶದ ನೂರು ವಿಶ್ವವಿದ್ಯಾಲಯಗಳಲ್ಲಿ ಮೊದಲನೆಯದಾಗಿದೆ.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಅವರು ಶನಿವಾರ ಕಲಬುರಗಿ ನಗರದಲ್ಲಿ ಹೇಳಿಕೆ ನೀಡಿ, ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‍ನಲ್ಲಿ ಇಂಟೆಲ್ ಉನ್ನತಿ ಡೇಟಾ ಸೆಂಟ್ರಿಕ್ ಲ್ಯಾಬೋರೇಟರಿ ಸ್ಥಾಪನೆಗೆ ವಿವಿ ಮತ್ತು ಸಾಫ್ಟ್‍ವೇರ್ ಮೇಜರ್ ಇಂಟೆಲ್ ತಿಳುವಳಿಕೆ ಪತ್ರ ಒಡಂಬಡಿಕೆ (ಒoU) ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಇಂಟೆಲ್, ಬೋಧನಾ ಸಿಬ್ಬಂದಿಗೆ ಅಗತ್ಯವಾದ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುವಂತೆ ಇತ್ತೀಚಿನ ತಂತ್ರಜ್ಞಾನದಲ್ಲಿ ಅವರ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ, ಅಲ್ಪಾವಧಿಯ ಪ್ರಮಾಣಪತ್ರ ಕೋರ್ಸ್ ಅನ್ನು ಸಹ ನೀಡುತ್ತದೆ ವಿದ್ಯಾರ್ಥಿಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಹಾಗೂ ಇನ್ನೊಂದು 30 ಗಂಟೆಗಳ ಕಲಿಕೆಯನ್ನು ಒಳಗೊಂಡಿರುವ ಡಿಜಿಟಲ್ ಲಾಕ್, ಎಂಬೆಡೆಡ್ ಸಿಸ್ಟಮ್, ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಎಕ್ಸಲರೆಷನ್ ಸ್ಟ್ಯಾಕ್‍ಅನ್ನು ಈPಉಂ ಜೊತೆಗೆ ಘಿeoಟಿ ಅPU ಗಾಗಿ ಪ್ರಮಾಣಪತ್ರ ಕೋರ್ಸ್‍ನಲ್ಲಿ ಪ್ರಮಾಣಪತ್ರಗಳನ್ನು ಸೇರಿಸಿ ನೀಡಲಾಗುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥೆ ಡಾ.ಸುಜಾತಾ ಮಲ್ಲಾಪುರ ಮಾತನಾಡಿ, 50 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಅಳವಡಿಸಲಾಗಿರುವ ಹೊಸ ಪ್ರಯೋಗಾಲಯವು ಉನ್ನತ ಮಟ್ಟದ ಮತ್ತು ಅತ್ಯಾಧುನಿಕ ಉPU ನೋಡ್‍ನೊಂದಿಗೆ ಓviಜiಚಿ ಂ10 ಉPU, ಇತ್ತೀಚಿನ ಆರ್ಟಿಫಿಶಿಯಲ್ ಇಂಟೆಲಿಜನ್ಸ್ Ioಖಿ ಕಿಟ್‍ಗಳು ಹಾಗೂ ಇತರ ನೋಡ್‍ಗಳು ಮತ್ತು ಉಪಕರಣಗಳು ಬಹಳ ದೂರ ದೂರದೃಷ್ಠಿವುಳ್ಳವಾಗಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್‍ನ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯಗಳನ್ನು ಹೆಚ್ಚಿಸುವಲ್ಲಿ ಹಾಗೂ ಇಂಟೆಲ್‍ನ ಪ್ರಮಾಣಪತ್ರಗಳು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಲಿವೆ ಎಂದು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ ನಿಷ್ಠಿ ಅವರು ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿಯವರು ಮಾಡಿದ ಎಲ್ಲಾ ಉದಾರ ಕಾರ್ಯಗಳಿಗೆ ಹಾಗೂ ಈಗ ವಿಶ್ವವಿದ್ಯಾಲಯದಲ್ಲಿ ಇಂಟೆಲ್-ಉನ್ನತಿ ಪ್ರಯೋಗಾಲಯವನ್ನು ಸ್ಥಾಪಿಸಲು 50 ಲಕ್ಷಕ್ಕೂ ಹೆಚ್ಚು ರೂ. ಧನಸಹಾಯ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಪ್ರಕಾರ ಇಂಟೆಲ್ ಪ್ರಯೋಗಾಲಯಗಳನ್ನು ಸ್ಥಾಪಿಸುವ ಸಂಸ್ಥೆಗಳು, ಕಾರ್ಯಾಗಾರಗಳು, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವೆಬ್‍ನಾರ್‍ಗಳು, ವಿದ್ಯಾರ್ಥಿಗಳಿಗೆ ಲಾಭದಾಯಕ ನಾವೀನ್ಯತೆ ಸವಾಲುಗಳಲ್ಲಿ ಭಾಗವಹಿಸುವ ಅವಕಾಶಗಳು ಸೇರಿದಂತೆ ಇತರ ಪ್ರಯೋಜನಗಳನ್ನು ಪಡೆಯುತ್ತವೆ ಎಂದು ಡಾ ಬಿಡವೆ ಹೇಳಿದರು. ಇದರಿಂದ ಅವರು ತಾವು ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಬಹುದು, ಹೊಸ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದ ಆಂತರಿಕ ಮತ್ತು ಅಂತರ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವಗಳು ಮತ್ತು ಅಧ್ಯಾಪಕರಿಗೆ ಸಂಶೋಧನಾ ಅನುದಾನಗಳನ್ನು ಒಳಗೊಂಡಿವೆ.

ಇಂಟೆಲ್-ಉನ್ನತಿ ಕೇಂದ್ರವು ವೇಗವಾಗಿ ಬದಲಾಗುತ್ತಿರುವ ಉದ್ಯಮದ ಅಗತ್ಯತೆಗಳು ಮತ್ತು ನಿರೀಕ್ಷೆಗಳಿಗೆ ವೇಗವನ್ನು ನೀಡುತ್ತದೆ ಮತ್ತು ಭವಿಷ್ಯದ ತಂತ್ರಜ್ಞಾನದ ಬೇಡಿಕೆಗಳನ್ನು ಪೂರೈಸಲು ವಿಶ್ವವಿದ್ಯಾಲಯಗಳಿಗೆ ಉದ್ಯಮವು ಸಮರ್ಥವಾಗಿ ನಿಗದಿಪಡಿಸಿದ ಗುರಿಗಳೊಂದಿಗೆ ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಾಗೂ ಕೌಶಲ್ಯಗಳನ್ನು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಯಶಸ್ವಿಯಾಗುವ ಸಾಮಥ್ರ್ಯವನ್ನು ಸೃಷ್ಟಿಸುತ್ತದೆ ಎಂದು ಅವರು ಡಾ. ಬಿಡವೆ ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ವಿಶ್ವವಿದ್ಯಾಲಯದ ಈ ಉನ್ನತ ಪ್ರಯೋಗಾಲಯದ ಸ್ಥಾಪನೆಯು ವಿದ್ಯಾರ್ಥಿಗಳಿಗೆ ಅವರ ಜ್ಞಾನ ಹೆಚ್ಚಿಸಲು ಬಹಳ ಉಪಯುಕ್ತವಾಗಿದೆ ಎಂದು ಶ್ಲಾಘಿಸಿ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here