ಕಲಬುರಗಿ: ಶಿವೈಕ್ಯರಾದವಿಜಯಪುರ ಜಾÐನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆಚಿತ್ರಕಲಾವಿದರು ಸ್ವಾಮೀಜಿ ಅವರ ಪ್ರವಚನ ಆಧಾರಿತ ಚಿತ್ರಗಳನ್ನು ರಚಿಸಿ ನಮನ ಸಲ್ಲಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹಿರಿಯ ಸಾಹಿತಿ ಡಾ ಕಲ್ಯಾಣರಾವ ಪಾಟೀಲ ಹೇಳಿದರು.
ನಗರದ ಚೈತನ್ಯಮಯಿ ಆರ್ಟ ಗ್ಯಾಲರಿಯಲ್ಲಿ ಹಿರಿಯ ಚಿತ್ರಕಲಾವಿದ ಡಾ.ಎ.ಎಸ್. ಪಾಟೀಲ್ ಅವರು ಸ್ವಾಮೀಜಿ ಪ್ರವಚನ ಆಧಾರಿತ ರಚಿಸಿ, ಚೈತನ್ಯಮಯಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಜಾÐನಯೋಗಾಶ್ರಮ ವಿಜಯಪುರ
ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಚಿತ್ರನಮನ ಏರ್ಪಡಿಸಿದ ಚಿತ್ರನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಗಾಧವಾದ ತತ್ವಜಾÐನದ ತಳಸ್ತರ್ರಿ ಅಧ್ಯಯನ ಮಾಡಿದ್ದ ಸ್ವಾಮೀಜಿ ಅವರು ತುಂಬ ಸರಳವಾಗಿ ಕೇಳುಗರಿಗೆ ತಿಳಿಯುವಂತೆ ಹಾಗು ಪ್ರಭಾವಿರಾಗುವಂತೆ ನೀಡಿತ್ತಿದ್ದ ಅವರ ಪ್ರವಚನ ಶೈಲಿ ಅನನ್ಯವಾಗಿದೆ ಎಂದರು.
ಕಲಾವಿದ ಡಾ.ಎ.ಎಸ್. ಪಾಟೀಲ್ ಸ್ವಾಗತಿಸಿ ಸ್ವಾಮೀಜಿ ಅವರೊಂದಿಗಿನ ಭೇಟಿ, ಪ್ರಭಾವ ಸ್ಮರಿಸಿ ಮಾತನಾಡಿದರು. ಅಧ್ಯಕ್ಷತೆವಹಿಸಿ ಪ್ರಭಾಕರ ಜೋಶಿ ನಿರ್ದೇಶಕರು ರಂಗಾಯಣ ಕಲಬುರಗಿವಹಿಸಿದ್ದರು. ಡಾ ಸುಜಾತಾ ಪಾಟೀಲ ನಿರೂಪಿಸಿ ಮತ್ತು ವಂದಿಸಿದರು.
ಹಿರಿಯ ಕಲಾವಿದರಾದ ಬಸವರಾಜ ಉಪ್ಪಿನ, ಬಸವರಾಜ ಜಾನೆ, ಮಂಜುಳಾ ಜಾನೆ, ಡಾ. ಎಂ. ಡಿ.ಮಿಣಜಗಿ, ಮಹ್ಮದ ಅಯಾಜೋದ್ದಿನ ಪಟೇಲ್, ಎಂ ಸಂಜೀವ, ರಾಜಶೇಖರ ಎಸ್. ವಿ.ಬಿ. ಬಿರಾದಾರ ನಾರಾಯಣ. ಎಂ. ಜೋಶಿ, ಮುಸ್ತಫಾ ಇತರರು ಇದ್ದರು. ಚಿತ್ರಕಲಾ ಪ್ರದರ್ಶನ ಫೆಬ್ರವರಿ 4ರವರೆಗೆ ಸಂಜೆ 4ರಿಂದ 8 ರವರಗೆ ಸಾರ್ವಜಿನಕರು ಕಲಾ ಆಸಕತ್ತರು ವಿಕ್ಷೀಸಬಹುದು ಎಂದು ಉಪಾಧ್ಯಕಷ ದಿನೇಶ ಪಾಟೀಲ ತಿಳಿಸಿದ್ದಾರೆ.