ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕರುಣೇಶ್ವರ ನಗರದಿಂದ ದಕ್ಷಿಣ ಕಾಶಿ ಶ್ರೀ ಕ್ಷೇತ್ರ ತಿಂತಿನಿ ಜಗದ್ಗುರು ಶ್ರೀ ಮೌನೇಶ್ವರ ದರ್ಶನಕ್ಕೆ ಮಹಾ ಪಾದಯಾತ್ರೆಯನ್ನು ಹಮ್ಮಿಕೊಳಲಾಯಿತು.
ಈ ಸಂದರ್ಭದಲ್ಲಿ ಮನೋಹರ ಪೆÇದ್ದಾರ ಮಾತನಾಡಿ. ಬದುಕನ್ನು ಪ್ರೀತಿಸಿ, ಹೃದಯ ಶ್ರೀಮಂತಿಕೆಯೊಂದಿಗೆ ಉತ್ತಮ ಆಚಾರ, ವಿಚಾರ , ಸಾತ್ವಿಕತೆ , ಪ್ರೀತಿ ವಿಶ್ವಾಸ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆದು ಸಜ್ಜನರಾಗಿ ಸಾರ್ಥಕ ಬದುಕನ್ನು ನಡೆಸಬೇಕು ಎಂದು ಹೇಳಿದರು. ರೈತರ ಬಡವರ ಕಲ್ಯಾಣಕ್ಕಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ಶ್ರೀ ಪುಜ್ಯ ರಾಮಚಂದ್ರ ಮಹಾಸ್ವಾಮಿಗಳು ಪಾದಯಾತ್ರೆಗೆ ಚಾಲನೆ ನೀಡಿದರು. ದೆವಿಂದ್ರ ದೇಸಾಯಿ ಕಲ್ಲೂರ, ಮಹಾರುದ್ರಪ್ಪ ಸುತಾರ, ಮೌನೇಶ ನಿಂಬಳಾ, ಅಶೋಕ ಸೇನಾರ, ಮಹಮದ ಅಲಿ, ಗಂಗಾಧರ ಸುತಾರ, ಭಗವಂತ ಸುತಾರ, ಮೌನೇಶ ಸುತಾರ, ಶಾಮ ಪೋದ್ದಾರ, ಅಣವೀರಪ್ಪ ಸುತಾರ, ರುದ್ರೇಶ ಹೇರೂರ, ಗುಂಡಣ್ಣ ಸುತಾರ, ಶರದಕುಮಾರ ಪೋದ್ದಾರ, ಸಿದ್ದು ಯಲಗೋಡ, ಮಹಾಂತಪ್ಪ ಹಿರಾಪೂರ, ಲೋಕೆಶ ಶಿಲವಂತ ಇದ್ದರು.