ಮಹಾತ್ಮ ಗಾಂಧಿ ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ್ದಾರೆ

0
20

ಸುರಪುರ: ದಿನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನವನ್ನು ಆಚರಿಸಲಾಯಿತು.ಮಹಾತ್ಮ ಗಾಂಧಿಯವರ ಅನೇಕ ಅಭಿಮಾನಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು. ಗಾಂಧೀಜಿ ಮೂರ್ತಿಗೆ ಹಾರ ಹಾಕಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ,’ಮೋಹನದಾಸ ಕರಮಚಂದ ಗಾಂಧಿ ಅವರು ಸಾಮಾನ್ಯತೆಯಿಂದ ಅಸಾಮಾನ್ಯತೆಯೆಡೆಗೆ ಸಾಗಿದವರು. ಅವರು ಸತ್ಯ ಅಹಿಂಸೆ ತ್ಯಾಗ ಪ್ರಾಮಾಣಿಕತೆ ಮೂಲಕ ಈ ದೇಶದ ಜನರಿಗೆ ಬ್ರಿಟೀಷ್ ರಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅವರು ಇಂದು ಜಗತ್ತಿನ ಮಹಾತ್ಮಾ . ಇಡೀ ಜಗತ್ತು ಅವರ ಜೀವನದ ರೀತಿ ನೀತಿಯಿಂದ ಪ್ರಭಾವಿತಗೊಂಡಿದೆ. ಮಹಾತ್ಮಾ ಗಾಂಧಿ ಎಂದಿಗೂ ಜನ ಮಾನಸದಲ್ಲಿ ತಮ್ಮ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಜಗತ್ತಿನಲ್ಲಿ ದಾಸ್ಯತ್ವವನ್ನು ಕಿತ್ತೊಗೆದು ಭಾವೈಕ್ಯದ ಮುನ್ನುಡಿ ಬರೆದವರು ಮಹಾತ್ಮಾಜಿ’ ಎಂದರು.

Contact Your\'s Advertisement; 9902492681

ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ ಮಾತನಾಡಿ, ‘ಈ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಹಳಷ್ಟು ಅಪಾಯಕಾರಿ ಸ್ಥಿತಿಯಲ್ಲಿವೆ. ಅದರ ರಕ್ಷಣೆಗಾಗಿ ಎಲ್ಲರೂ ಕೈ ಜೋಡಿಸಬೇಕು. ಮಹಾತ್ಮಾನಂತಹ ಶ್ರೇಷ್ಠರ ದಾರಿಯಲ್ಲಿ ಸಾಗಬೇಕು. ಮುಂದೆ ಬರಲಿರುವ ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಗೌರವ ಕಾಪಾಡಬೇಕು’ ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಹಣಮಂತ ಕಟ್ಟಿಮನಿ ಮಾತನಾಡಿದರು. ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ವೆಂಕೋಬ ದೊರೆ,ಪೊಲೀಸ್ ಪೇದೆ ದಯಾನಂದ ಜಮಾದಾರ,ಜಾನಪದ ಕಲಾವಿದ ಲಕ್ಷ್ಮಣ ಗುತ್ತೇದಾರ, ಚಿನ್ನು ಪಟೇಲ, ಬಿಜೆಪಿ ಧುರಿಣ ಮಲ್ಲೇಶಿ ಪಾಟೀಲ, ನ್ಯಾಯವಾದಿ ಅನಿಲ, ಕನ್ನಡಪರ ಹೋರಾಟಗಾರ ಭಾಗನಾಥ ಗುತ್ತೇದಾರ ರುಕ್ಮಾಪುರ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here