ಜೇವರ್ಗಿ: ಇದೇ 25ರಂದು ನಡೆಯಲಿರುವ ದಿ.ಶಿವಲಿಂಗಪ್ಪ ಪಾಟೀಲ ನರಿಬೋಳ ಅವರ ಮೂರ್ತಿ ಅನಾವರಣ ಮತ್ತು ಉಚಿತ ಸಾಮೂಹಿಕ ವಿವಾಹ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನ ಯಾಳವಾರ ಗ್ರಾಪಂ ವ್ಯಾಪ್ತಿಯ ಸಿಗರಥಹಳ್ಳಿ ಗ್ರಾಮದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಜಿಪಂ ಮಾಜಿ ಸದಸ್ಯರಾದ ಬಸವರಾಜ ಪಾಟೀಲ ನರಿಬೋಳ ಮಾತನಾಡಿˌ ಬಡವರ ಸೇವೆಗೆ ನಮ್ಮ ತಂದೆ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಸದಾ ಬಡವರ ಬಗ್ಗೆ ಕಾಳಜಿ ಹೊಂದಿದ್ದರು. ಹೀಗಾಗಿ ತಾವೂ ಕೂಡ ಅವರ ಮಾರ್ಗದಲ್ಲಿ ಹೆಜ್ಜೆ ಇಡುತ್ತಿದ್ದೇವೆ ಎಂದರು. ಕಲಬುರಗಿ ಜಿಲ್ಲೆಯಾದ್ಯಂತ ಬಡವರುˌ ದೀನ ದಲಿತರು ಉಚಿತವಾಗಿ ಮದುವೆಯಾಗಬಯಸಿದರೆ ಸಂಪರ್ಕಿಸಬೇಕು ಎಂದರು.
ಇದೇ ವೇಳೆ ಸಮಸ್ತ ಗ್ರಾಮಸ್ಥರಿಗೆ ಆಹ್ವಾನ ಪತ್ರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ವಾಲ್ ಪೋಸ್ಟರ್ ಬಿಡುಗಡೆ ಮಾಡಿದರು.
ಬಿಜೆಪಿ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಗ್ರಾಮದ ವಿವಿಧ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.