ಕಲ್ಯಾಣ ಕರ್ನಾಟಕವನ್ನು ಅವಮಾನಿಸಿದ “ಮುಖ್ಯಮಂತ್ರಿ”

0
15

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಂಕಣ ತೊಟ್ಟು ಹಗಲಿರುಳು ಶ್ರಮಿಸುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಬಗ್ಗೆ ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡರಾದ ಮುಖ್ಯಮಂತ್ರಿ ಚಂದ್ರು ಹಗುರವಾಗಿ ಮಾತನಾಡಿರುವುದು ಅವರ ವಯಸ್ಸಿಗೆ ಮತ್ತು ಅವರ ಘನತೆಗೆ ತಕ್ಕುದ್ದಲ್ಲ ಎಂದು ಹೋರಾಟಗಾರ ನಾಗಲಿಂಗಯ್ಯ ಮಠಪತಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಳ್ಳ-ಖದೀಮರ ಅಭಿವೃದ್ಧಿ ಮಂಡಳಿ ಎಂದು ಕೀಳುಮಟ್ಟದ ಪದಪ್ರಯೋಗ ಮಾಡಿರುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮುಖ್ಯಮಂತ್ರಿ ಚಂದ್ರು ರವರು ಕೇವಲ ಮಂಡಳಿಗೆ ಮಾತ್ರ ಅಪಮಾನಿಸಿಲ್ಲ, ಸಮಸ್ತ ಕಲ್ಯಾಣ ಕರ್ನಾಟಕ ಜನತೆಯ ಆತ್ಮ ಗೌರವಕ್ಕೆ ಹಾಗೂ ಸಾಕ್ಷಿ ಪ್ರಜ್ಞೆಗೆ ಕಳಂಕ ತಂದಿಟ್ಟಿದ್ದಾರೆಂದು ಮಠಪತಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ರವರು ಅಧಿಕಾರ ಸ್ವೀಕರಿಸಿದ ನಂತರ ಹೊಸ ಚಿಂತನೆ, ಭವಿಷ್ಯದ ಆಲೋಚನೆ, ವರ್ತಮಾನದ ಅಭಿವೃದ್ಧಿ ಕುರಿತು ಮಂಡಳಿ ಕೈಗೊಂಡ ಕೆಲಸ ಕಾರ್ಯಗಳು ಜನಮನದಲ್ಲಿ ಶಾಶ್ವತವಾಗಿ ನೆಲೆ ಊರುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಚಂದ್ರು ಕೂಡಲೇ ಕಲ್ಯಾಣ ಕರ್ನಾಟಕದ ಜನತೆಗೆ ಕ್ಷಮೆಯಾಚಿಸಬೇಕು. ಒಂದುವೇಳೆ ಮೊಂಡತನ ಪ್ರದರ್ಶನ ಮಾಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here