ಕಲಬುರಗಿ; ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎ.ಆರ್.ಕರ್ನೂಲ್ ಇವರ ನೇತೃತ್ವದಲ್ಲಿ ಕಲಬುರಗಿ ಕರ್ನಾಟಕ ಲೋಕಾಯುಕ್ತ ಡಿಎಸ್‍ಪಿ ಯವರಾದ ಸಿದ್ದಲಿಂಗಪ್ಪಗೌಡ.ಆರ್.ಪಾಟೀಲ್ ಅವರು ಬುಧವಾರ ನಗರದ ಎರಡು ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ವಸತಿ ನಿಲಯಗಳ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿದರು.
ಕಲಬುರಗಿ ನಗರದ ರಾಜಾಪೂರ ರಸ್ತೆಯಲ್ಲಿರುವ (ಪ.ಜಾತಿ) ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಹಾಗೂ ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಹಿಂದಿ ಪ್ರಚಾರ ಸಭೆ ಎದುರುಗಡೆಯಿರುವ ಸಮಾಜ ಕಲ್ಯಾಣ ಇಲಾಖೆಯ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ಸಮುಚ್ಚಯ ಭೇಟಿ ನೀಡಿ ಪರಿಶೀಲಿಸಿದರು.