ಯುವ ಬರಹಗಾರರಿಗೆ ಕಸಾಪ ಪ್ರೋತ್ಸಾಹ: ಶಾಸ್ತ್ರೀ

0
20

ವಾಡಿ: ಹೊಸ ತಲೆಮಾರಿನ ಯುವ ಬರಹಗಾರರಿಂದ ದೂರ ಉಳಿದಿದ್ದ ಕನ್ನಡ ಸಾಹಿತ್ಯ ಪರಿಷತ್ತು ಇದೀಗ ಮಗ್ಗಲು ಬದಲಿಸಿದೆ. ಯುವ ಪ್ರತಿಭಾವಂತ ಲೇಖಕರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದು, ಇದು ಕಲಬುರಗಿ ಸಾಹಿತ್ಯ ವಲಯದಲ್ಲಿ ಉತ್ತಮ ಪರಿವರ್ತನೆ ಎಂದು ಕಸಾಪ ವಾಡಿ ವಲಯ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಸ್ಮರಿಸಿದರು.

ಇದೇ ಫೆ.11 ರಂದು ಕಲಬುರಗಿ ನಗರದಲ್ಲಿ ಏರ್ಪಡಿಸಲಾಗಿರುವ ಜಿಲ್ಲಾ ಮಟ್ಟದ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಪ್ರಥಮ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ರಾವೂರಿನ ಯುವ ಲೇಖಕ ಡಾ.ಮಲ್ಲಿನಾಥ ಎಸ್.ತಳವಾರ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು. ಕಲ್ಲು ಗಣಿಗಳಿಂದ ಗಮನ ಸೆಳೆದಿರುವ ಚಿತ್ತಾಪುರ ತಾಲೂಕು ಹಾಗೂ ನಾಲವಾರ ವಲಯದಲ್ಲಿ ಸಾಹಿತ್ಯ ಕೃಷಿಕರ ಕೊರತೆಯಿತ್ತು. ಆದರೀಗ ಸಾಹಿತ್ಯ ವೇದಿಕೆಗಳು ಹುಟ್ಟಿಕೊಂಡಿವೆ. ಕಸಾಪ ಕ್ರೀಯಾಶೀಲವಾಗಿ ಸಾಹಿತ್ಯ ಚಟುವಟಿಕೆ ಮಾಡುತ್ತಿದೆ. ಪರಿಣಾಮ ಎಲೆಮರೆ ಕಾಯಿಯಂತಿದ್ದ ಬರಹಗಾರರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಡಾ.ಮಲ್ಲಿನಾಥ ತಳವಾರ ಅವರು ಹಲವು ಕೃತಿಗಳನ್ನು ಪ್ರಕಟಿಸಿ ತಾಲೂಕಿನ ಹೆಮ್ಮೆ ಹೆಚ್ಚಿಸಿದ್ದಾರೆ ಎಂದರು.

Contact Your\'s Advertisement; 9902492681

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಡಾ.ಮಲ್ಲಿನಾಥ ತಳವಾರ ಅವರನ್ನು ಗುರುತಿಸಿ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ. ಅಲ್ಲದೆ ಈ ಪ್ರಥಮ ಯುವ ಸಾಹಿತ್ಯ ಸಮ್ಮೇಳನದಲ್ಲಿ ಹೊಸ ಯುವ ಬರಹಗಾರರಿಗೆ ಅವಕಾಶಗಳನ್ನು ಒದಗಿಸಿದ್ದಾರೆ. ಇದು ಬರಹಗಾರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಮುಂದಿನ ದಿನಗಳಲ್ಲಿ ಹೊಸಬರ ಸಾಹಿತ್ಯ ಮುದ್ರಣಕ್ಕೂ ಜಿಲ್ಲಾ ಕಸಾಪ ಮುಂದಾದರೆ ಅದು ಇನ್ನೊಂದು ಮೈಲಿಗಲ್ಲಾಗಲಿದೆ ಎಂದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಗೌರವ ಕಾರ್ಯದರ್ಶಿ ಚಂದ್ರು ಕರಣಿಕ, ಸಂಘ ಸಂಸ್ಥೆ ಪ್ರತಿನಿಧಿ ಬಸವರಾಜ ಕೇಶ್ವಾರ, ದೇವಿಂದ್ರ ಕರದಳ್ಳಿ, ವೀರಣ್ಣ ಯಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here