ಕಲಬುರಗಿ; ನಗರದ ವಾರ್ಡ್ ನಂ.32ರ ಗುಬ್ಬಿ ಕಾಲೊನಿಯಲ್ಲಿ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಬುಧವಾರ ಗುಬ್ಬಿ ಕಾಲೊನಿ ನಿವಾಸಿಗಳು ಸಾಯಿ ನಗರದ ಕುಡಿಯುವ ನೀರಿನ ಟ್ಯಾಂಕ್ ಎದುರು ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗುಬ್ಬಿ ಕಾಲೊನಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಮುಕ್ತಾಯವಾಗಿ ಎರಡು ವರ್ಷ ಪೂರ್ಣಗೊಂಡರೂ ಇಲ್ಲಿಯವರೆಗೆ ಟ್ಯಾಂಕ್‍ನಿಂದ ನೀರು ಸರಬರಾಜು ಮಾಡಿಲ್ಲ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಇದನ್ನು ಬಗೆ ಹರಿಸಬೇಕು ಎಂದು ಒತ್ತಾಯಿಸಿದರು. ಪರಿಸರ ಇಲಾಖೆ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗುಬ್ಬಿಕಾಲೊನಿಯಲ್ಲಿ ನಾಯಿಗಳು, ಹಂದಿಗಳು ಸಂಖ್ಯೆ ಹೆಚ್ಚಾಗಿದ್ದರಿಂದ ಮಕ್ಕಳು, ಮಹಿಳೆಯರಿಗೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಚಿಕ ಚರಂಡಿಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ನಿವಾಸಿಗಳಾದ ಜಗದೇವ ಎಂ.ಗುತ್ತೇದಾರ್, ಅನಿಲಕುಮಾರ ರಟಕಲ್, ಶಿವರುದ್ರಪ್ಪ ಹತ್ತಿ, ಲಿಂಗರಾಜ ವೀರಶೆಟ್ಟಿ, ರತ್ನಾಕರ್ ನಾಯಕ, ಶರಣು ಸಜ್ಜನಶೆಟ್ಟಿ, ಶಾಮ ಹಿಬಾರೆ, ಮಲ್ಲಿನಾಥ ಪುಸಲೇ, ಮಲ್ಲಿನಾಥ ಮಚ್ಚಟ್ಟಿ, ಸುಬಾಶ್ಚಂದ್ರ ಕಡಗಂಚಿ, ನಂದೀಶ ಕಡಗಂಚಿ, ಸಿದ್ದರಾಜ ಬಿರಾದಾರ ಇತರರಿದ್ದರು.