ಕಲಬುರಗಿ: ಶಾಲೆ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಅಲ್ ಹುದಾ ಉರ್ದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಜೇವರ್ಗಿ ಶಾಲೆಯ ಪ್ರಾಂಶುಪಾಲ ವಿರುದ್ಧ ಪ್ರಕರಣ ದಾಖಲಾಗುತ್ತಿದಂತೆ ಪ್ರಾಚಾರ್ಯರನ್ನು ಅಮಾನತು ಗೊಳ್ಳಿಸಲಾಗಿದೆ.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಸತ್ತಾರ ಸಾಬ್ ಮತ್ತು ಪ್ರಾಂಶುಪಾಲರಾದ ರೋಷನ್ ಜಮೀರ್ ಇಬ್ಬರು ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಾಹಿಸುತ್ತಿದ ತನ್ನ ಸಹೋದ್ಯೋಗಿಗೆ ನಾಲ್ಕು ವರ್ಷಗಳಿಂದ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಲಾಗಿದೆ.
ಶಿಕ್ಷಕಿಯನ್ನು ಸಂಸ್ಥೆ ಸಭೆಗಳಲ್ಲಿ ಮತ್ತು ಅನಾವಶ್ಯಕ ಕಚೇರಿಗೆ ಕರೆದು ಕಿರುಕುಳ ನೀಡಲಾಗುತ್ತಿತ್ತು ಎಂದು ನೊಂದ ಮಹಿಳೆ ಪೊಲೀಸ್ರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಆರೋಪಿಗಳು ನ್ಯಾಯಲದಿಂದ ಜಾಮೀನು ಪಡೆದಿದ್ದು, ಪ್ರಾಂಶುಪಾಲ್ ರೋಷನ್ ಜಮೀರ್ ನನ್ನು ಅಮಾನತುಗೊಳ್ಳಿಸಿ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.