ರಾಜ್ಯದಲ್ಲಿ ಇದೇ ಮೊದಲ ಬಾರಿಗೆ “ಮಕ್ಕಳು ಮೆಚ್ಚಿದ ಶಿಕ್ಷಕ” ಪ್ರಶಸ್ತಿ ಪ್ರಕಟ

0
128

ಕಲಬುರಗಿ: ಪ್ರಜ್ಞಾ ಫೌಂಡೇಷನ್ ಹಾಗೂ ಪ್ರಜ್ಞಾ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ಕಲಬುರಗಿ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ “ಮಕ್ಕಳು ಮೆಚ್ಚಿದ ಶಿಕ್ಷಕ” ಪ್ರಶಸ್ತಿ ಪ್ರಕಟಿಸಲಾಗಿದೆ.

ಇದೊಂದು ವಿಶೇಷ ಹಾಗೂ ವೈಶಿಷ್ಠ್ಯಪೂರ್ಣ ಪ್ರಶಸ್ತಿಯಾಗಿದ್ದು, ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಆಯ್ಕೆ ಮಾಡಲಾಗಿದೆ. ಶಿಕ್ಷಕರ ಕಾರ್ಯವೈಖರಿ, ಮಕ್ಕಳೊಂದೊಗಿನ ಒಡನಾಟ, ಬೋಧನಾ ವಿಧಾನ, ತರಗತಿ ಪ್ರಕ್ರಿಯೆಯಲ್ಲಿ ನಾವಿನ್ಯತೆ, ಶೈಕ್ಷಣಿಕ ಪ್ರಕ್ರಿಯೆಯಲ್ಲಿ ತೊಡಗುವಿಕೆ, ಶಿಕ್ಷಕ ವೃತ್ತಿಗಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜೊತೆಗೆ ಮಕ್ಕಳ ಮನಸ್ಸಿನಾಳಕ್ಕಿದು ಮಕ್ಕಳ ವೇಗಕ್ಕೆ ತಕ್ಕಂತೆ ಬೋಧನೆ ಮಾಡುವ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

“ಮಕ್ಕಳು ಮೆಚ್ಚಿದ ಶಿಕ್ಷಕ” ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಶಿಕ್ಷಕರು: ವೀರಣ್ಣ ಮಡಿವಾಳ, ಬಸವರಾಜ ಸುಣಗಾರ ಬೆಳಗಾವಿ ಜಿಲ್ಲೆ. ಸೋಮು ಕುದಿರಿಹಾಳ- ಕೊಪ್ಪಳ ಜಿಲ್ಲೆ. ವೀರಯ್ಯ ಎಂ.ಪಿ.ಎಂ.-ಬಳ್ಳಾರಿ ಜಿಲೆ.್ಲ ಸತೀಷ್ ಬಿ.ಕೆ.- ದಾವಣಗೇರೆ ಜಿಲ್ಲೆ. ಹುಸೇನ ವಡಗೇರಾ, ಮಹೇಶಕುಮಾರ ಬಡಿಗೇರ, ಅಶೋಕ ತೊಟ್ನಳ್ಳಿ, ಸುವರ್ಣ, ಸಿದ್ಧಲಿಂಗ ಬಾಳಿ, ಪಾರ್ವತಿ, ರಾಜೇಶ್ವರಿ, ವಿಜಯಕುಮಾರ ಪಾಟೀಲ-ಕಲಬುರಗಿ ಜಿಲ್ಲೆ ತೋಟಮ್ಮ, ಭೀಮಪ್ಪ ಬೆಲ್ಲದ-ರಾಯಚೂರ ಜಿಲ್ಲೆ ಉಮಾಮಹೇಶ, ವಿಜಯಕುಮಾರಿ–ತುಮಕೂರ ಜಿಲ್ಲೆ. ನಾಗಣ್ಣ ಶಾಹಾಬಾದಿ,ನಾಗರತ್ನ, ಗುರಪ್ಪ ಬಂಡಿವಡ್ಡರ, ಈರಣ್ಣ ಭಜಂತ್ರಿ ಸಾಹೇಬಗೌಡ ಬಿರಾದಾರ–ಯಾದಗಿರಿ ಜಿಲ್ಲೆ. ಮಾರ್ಥಾಂಡ, ಸಂತೋಷಕುಮಾರ, ಖಲಿಲ್ ಅಹಮದ್, ವಿಷ್ಣುಕಾಂತ, ರಾಜೇಶ್ವರಿ ಕಲ್ಮನಿ – ಬೀದರ ಜಿಲ್ಲೆ

ಫೆಬ್ರವರಿ 12ಕ್ಕೆ ಕಲಬುರಗಿ ನಗರದಲ್ಲಿ ಆಯೋಜಿಸಿರುವ ಸುಂದರ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಿಗೌರವಿಸಲಾಗುವುದು ಎಂದು ಪ್ರಜ್ಞಾ ಫೌಂಡೇಷನ್ ನ ಸಂಸ್ಥಾಪಕ ನಿರ್ದೇಶಕರಾದ ಕೆ.ಎಂ.ವಿಶ್ವನಾಥ ಮರತೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here