ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ 19 ನೇ ಪುಣ್ಯ 12ಕ್ಕೆ

0
29

ಆಳಂದ; ತಾಲೂಕಿನ ಸುಕ್ಷೇತ್ರ ಜಿಡಗಾ ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ನವಕಲ್ಯಾಣ ಮಠದಲ್ಲಿ  ಫೆ.12 ರಂದು ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ 19 ನೇ ಪುಣ್ಯ ಸ್ಮರಣೆ ಹಾಗೂ ಮಹಾ ರಥೋತ್ಸವ ಜಿಡಗಾ-ಮುಗಳಕೋಡ ಮಠಗಳ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಮಠದಲ್ಲಿ ಸಂಜೆ ಶಿವಾಚಾರ್ಯ ಸ್ವಾಮೀಜಿ ಅವರಿಂದ ಅಥಣಿಯ ಶಿವಯೋಗಿಗಳ ಪುರಾಣ ನಡೆಯುತ್ತಿದ್ದು, ಆಸ್ಥಾನ ಮಠದ  ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ಫೆ. 10 ರಂದು ಅಜ್ಜನ ರೊಟ್ಟಿ ಬುತ್ತಿ ಜಾತ್ರೆ ನಡೆಯುವದು. ಫೆ. 11 ರಂದು ಡಾ. ಮುರುಘರಾಜೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಅಯಾಚಾರ ಹಾಗೂ ಸಾಮೂಹಿಕ ಲಿಂಗ ದೀಕ್ಷೆ ಕಾರ್ಯಕ್ರಮ ಜರುಗಲಿವೆ.

Contact Your\'s Advertisement; 9902492681

12 ರಂದು ಮುಂಜಾನೆ ಸಿದ್ಧರಾಮ ಶಿವಯೋಗಿಗಳ ಜಾಗತ ಗದ್ದುಗೆಗೆ ಶ್ರೀಗಳಿಂದ ಮಹಾರುದ್ರಾಭಿಷೇಕ , ಪುಷ್ಪವಷ್ಠಿ ಬಳಿಕ ಬ್ರಹ್ಮ ವೇದಿಕೆಯಲ್ಲಿ ಶ್ರೀಗಳಿಗೆ ಭಕ್ತರಿಂದ ಸುವರ್ಣ ಕಿರೀಟ ಧಾರಣೆ ಸಿಂಹಾಸನಾರೋಹಣ, ಪಾದಪೂಜೆ ನಂತರ ಶ್ರೀಗಳಿಂದ ಆಶೀರ್ವಚನ ನೀಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here