ಕಲಬುರಗಿ: ಇಡಿ ಕಲ್ಯಾಣ ಕರ್ನಾಟಕ ಹಿಂದುಳಿಯಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರಣ. ಐದು ದಶಕ ಆಡಳಿತ ನಡೆಸಿದರೂ ಈ ಭಾಗದ ಯಾವ ಊರನ್ನು ಅಭಿವೃದ್ಧಿ ಮಾಡಲಿಲ್ಲ, ಅಪ್ಪ-ಮಗ ಪ್ರತಿನಿಧಿಸಿದ ಕ್ಷೇತ್ರವೂ ಹೊರತಾಗಿಲ್ಲ. ಸಂಪೂರ್ಣವಾಗಿ ನಿರ್ಲಕ್ಷೃ ಮಾಡಿಕೊಂಡು ಬಂದಿರುವುದೇ ದೊಡ್ಡ ಸಾಧನೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಎಂಎಲ್‍ಸಿ ಎನ್.ರವಿಕುಮಾರ ಕಿಡಿಕಾರಿದರು.
ನಗರದ ಸೂಪರ್ ಮಾರ್ಕೇಟ್‍ನಲ್ಲಿರುವ ಕೆಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕಲಬುರಗಿ ಗ್ರಾಮಾಂತರ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿ ಮಾಡದಿರುವುದರಿಂದ ಬೇಸತ್ತು ಕಳೆದ ಸಲ ಅಪ್ಪನನ್ನು ಸೋಲಿಸಿದ್ದಾರೆ. ಈ ಸಲ ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆಯನ್ನು ಸಹ ಸೋಲಿಸುತ್ತೇವೆ. ಇದರೊಂದಿಗೆ ಅಪ್ಪನ ಜತೆಗೆ ಮಗನ ಖಾತೆನೂ ಬಂದ್ ಮಾಡುತ್ತೇವೆ ಎಂದು ಗುಡುಗಿದರು.
ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಗಳಿಗೆ ಭರ್ಜರಿಯಾಗಿ ಮತ್ತು ಪ್ರಬಲ ತಿರುಗೇಟು ನೀಡುವ ಮೂಲಕ ಖರ್ಗೆ ಅವರ ಖಾತೆ ಕಲಬುರಗಿಯಲ್ಲಿ ಬಂದ್ ಆಗಿದೆ ಎಂದಿದ್ದಾರೆ. ಅದೇ ರೀತಿಯಲ್ಲಿ ಚಿತ್ತಾಪುರ ಕ್ಷೇತ್ರ ಮತ್ತು ಜಿಲ್ಲೆಯ ಎಲ್ಲರ ಮುಖಂಡರು ಸೇರಿಕೊಂಡು ಪ್ರಿಯಾಂಕ್ ಖರ್ಗೆ ಅವರನ್ನು ಈ ಸಲ ಸೋಲಿಸಿ ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪ್ರಿಯಾಂಕ್ ಖರ್ಗೆ ಸಂಸ್ಕøತಿ ಇಲ್ಲದ ವ್ಯಕ್ತಿ, ಏನು ಮಾತನಾಡಬೇಕು ಎಂಬ ಯೋಚನೆ ಮಾಡಲ್ಲ, ಚಿತ್ತಾಪುರ ಶಾಸಕರಾಗಿದ್ದು ಸಂಸ್ಕøತಿ ಹೀನರಾಗಿದ್ದಾರೆ. ಈಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ, ಅಧಿಕಾರದಲ್ಲಿದ್ದಾಗ ಏನು ಮಾಡಿದರೂ ಎಂದು ಖಾರವಾಗಿ ಪ್ರಶ್ನಿಸಿದರು. ಕಲ್ಯಾಣ ಖಲ್ಯಾಣದ ಜಿಲ್ಲೆಗಳು, ಗುರುಮಠಕಲ್ ಮತ್ತು ಚಿತ್ತಾಪುರ ತೀರಾ ಹಿಂದುಳಿಯಲು ಯಾರು ಕಾರಣ ಎಂಬುದು ಹೇಳಿ ಎಂದರು. ಏನಾದರೂ ಒಂದಿಷ್ಟು ಅಭಿವೃದ್ಧಿ ಕಂಡಿದ್ದರೆ, ಅದು ಕಾಂಗ್ರೆಸ್ ಆಡಳಿತಾವಧಿ ಹೊರತುಪಡಿಸಿ ಎಂದು ರವಿಕುಮಾರ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಖರ್ಗೆಯವರನ್ನು ಸೋಲಿಸಿದವರ ಸಹ ದಲಿತರೆ, ಆದರೆ, ಅವರಿಗೆ ಸಹನ ಶಕ್ತಿಯೇ ಇಲ್ಲ. ಇಷ್ಟು ಆಡಳಿತ ನಡೆಸಿ, ಈಗ ಹಿಂಬಾಗಿಲ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದಾರೆ. ಪ್ರಧಾನಿ ಮೋದಿ ಏಟಿಗೆ ಮೆತ್ತಗಾಗಿದ್ದಾರೆ.ಅದರಂತೆ ಈ ಸಲ ಎಲ್ಲರು ಸೇರಿಕೊಂಡು ಚಿತ್ತಾಪುರದಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರಲು ಕೆಲಸ ಮಡಬೇಕು ಎಂದು ತಿಳಿಸಿದರು.
ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉೀವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ ಠಾಕೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ತಳವಾರ, ಶೋಭಾ ಬಾಣಿ ಇತರರಿದ್ದರು.
ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ನಿರೂಪಿಸಿದರು. ನಾಗಪ್ಪ ಕೊಳ್ಳಿ ಸ್ವಾಗತಿಸಿದರು. ಅಯ್ಯಪ್ಪ ರಾಮತೀರ್ಥ ಪ್ರಾರ್ಥಿಸಿದರು. ಪ್ರಮುಖರಾದ ಅರವಿಂದ ಚವ್ಹಾಣ, ರಾಜಕುಮಾರ ಕೋಟಿ, ಭಾಗೀರಥಿ ಗುನ್ನಾಪುರ,ಗೌರಿ ಚಿಚಕೋಟಿ, ಮಲ್ಲಿನಾಥ ಪಾಟೀಲ್ ಯಲಗೋಡ ಮೊದಲಾದವರಿದ್ದರು.