ಆಳಂದ : ಪಟ್ಟಣದ ಉಮರ್ಗಾ ರಸ್ತೆಯ ಕುಮಾರ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಹಾರ ಮೇಳ ನಡೆಯಿತು.ಖ್ಯಾತ ಉದ್ಯಮಿ ವಿಶಾಲ ಗಾಂಧಿ ಕಾರ್ಯಕ್ರಮ ಉದ್ಘಾಟಿಸಿ,ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಆನಂದ ದೇಶಮುಖ ಮಾತನಾಡಿ,ಇಂತಹ ಕಾರ್ಯಕ್ರಮದಿಂದ ಮಕ್ಕಳ ಕೌಶಲ್ಯ ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯಗುರು ಚಂದ್ರಕಾಂತ ಕುಮಟಗಿ,ಶಿಕ್ಷಕಿಯರಾದ ಗೋಷಿಯಾ ಶೇಖ್,ರೇಶ್ಮಾ,ಮಮತಾ,ಲಕ್ಷ್ಮಿ,ಅಲೀಕಾ ಸೇರಿದಂತೆ ಪಾಲಕರು,ವಿದ್ಯಾರ್ಥಿಗಳು,ಪಾಲಕರು ಮತ್ತಿತರರು ಪಾಲ್ಗೊಂಡಿದ್ದರು.