‘ಮಹಿಳೆಯರು ಸೂಕ್ತ ಮಾಹಿತಿಯೊಂದಿಗೆ ಉದ್ಯಮ ಆರಂಭಿಸಿ ಯಶಸ್ವಿಯಾಗಿ’

0
30

ಕಲಬುರಗಿ: ಮಹಿಳೆಯರು ಕುಟುಂಬಕ್ಕೆ ಮಾತ್ರ ಸೀಮಿತವಾಗಬಾರದು. ಸೂಕ್ತ ತರಬೇತಿ, ಮಾಹಿತಿಯನ್ನು ಪಡೆದು, ಯಶಸ್ವಿ ಉದ್ಯಮಿಗಳ ಮಾರ್ಗದರ್ಶನದೊಂದಿಗೆ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಬೇಕು.ಇದರಿಂದ ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ಅನೇಕ ಜನರಿಗೆ ಉದ್ಯೋಗಗಳು ದೊರೆಯುತ್ತವೆ. ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.

ನಗರದ ಸಮೀಪದ ತಾಜ್ ಸುಲ್ತಾನಪುರ ಗ್ರಾಮದ ‘ಶ್ರೀ ವಿಶ್ವಗುರು ಬಸವಣ್ಣ ಸಾಂಸ್ಕøತಿಕ ಭವನ’ದಲ್ಲಿ ಎಎಲ್‍ಎಫ್ ಪ್ರತಿಷ್ಠಾನದ ವತಿಯಿಂದ ಮಹಿಳಾ ಉದ್ಯಮಿಗಳ 5 ದಿವಸಗಳ ಡಿಜಿಟಲ್ ಸಖಿ ತರಬೇತಿ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಉದ್ಯಮಗಳು ಪೂರಕವಾಗಿವೆ. ದೃಢ ವಿಶ್ವಾಸ, ಸೂಕ್ತ ಮಾಹಿತಿ, ತರಬೇತಿ, ತಂತ್ರಜ್ಞಾನದ ಬಳಕೆ, ಸ್ವಪ್ರೇರಣೆ, ಆತ್ಮವಿಶ್ವಾಸ, ಪ್ರಬಲ ಇಚ್ಛಾಶಕ್ತಿ, ಸರ್ಕಾರದ ಯೋಜನೆಗಳ ಸದುಪಯೋಗ, ಪುರುಷ ಸಮಾಜದ ಸಹಕಾರ ಇವುಗಳು ಮಹಿಳೆಯರು ಯಶಸ್ಸು ಉದ್ಯಮಿಗಳಾಗಲು ಪೂರಕವಾದ ಅಂಶಗಳಾಗಿವೆ. ಮಹಿಳೆಯರು ಸಂಘಗಳನ್ನು ಸ್ಥಾಪಿಸಿಕೊಂಡು ಅವುಗಳ ಮೂಲಕ ಗೃಹ ಕೈಗಾರಿಕೆಗಳನ್ನು ಆರಂಭಿಸುವುದು, ಮೌಢ್ಯತೆ, ಕಂದಾಚಾರ, ಅಂಧಶೃದ್ದೆಯಂತಹ ಸಾಮಾಜಿಕ ಅನಿಷ್ಠಗಳ ವಿರುದ್ಧ ಜನಜಾಗೃತಿ ಮೂಡಿಸುವುದು, ಸಾಕ್ಷರತಾ ದರ ವೃದ್ಧಿ, ಶೌಚಾಲಯ ನಿರ್ಮಾಣ, ಪರಿಸರ ಸಂರಕ್ಷಣೆ ಅಂತಹ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದು ಅನೇಕ ವಿಷಯಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಅಕ್ಕಿ, ಭೀಮಶ್ಯಾ ಸಾಗರ, ಪಾರ್ವತಿ ಬಿ.ಮಡಿವಾಳ, ರೇಣುಕಾ ನಾಗಿದಲಾಯಿ, ಶ್ವೇತಾ ಸುಲ್ತಾನಪುರ, ಸುಜಾತಾ ಕಪನೂರ, ಗೀತಾ ಸೈಯದ್ ಚಿಂಚೋಳಿ, ಸುಜಾತಾ ಪಾಚನಳ್ಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ತರಬೇತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ವಿವರಿಸಲಾಯಿತು. ತಾಜ್ ಸುಲ್ತಾನಪುರ, ಕಪನೂರ, ಸೈಯದ್ ಚಿಂಚೋಳಿ ಈ ಮೂರು ಗ್ರಾಮಗಳ ಒಟ್ಟು 35 ಜನ ಉದ್ಯಮಶೀಲ ಮಹಿಳೆಯರಿಗೆ ತರಬೇತಿ ನೀಡಲಾಯಿತು. ಎಎಲ್‍ಎಫ್ ಪ್ರತಿಷ್ಠಾನವು ಕರ್ನಾಟಕದ ನಾಲ್ಕು ಜಿಲ್ಲೆಗಳು ಮತ್ತು ಕೇರಳದ ಎರಡು ಜಿಲ್ಲೆಗಳ ಒಟ್ಟು 410 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ತರಬೇತಿಯನ್ನು ನೀಡಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here