ಚಿಂಚೋಳಿ; 12 ನೆಯ ಶತಮಾನದ ಸಮಾಜೋ ಧಾರ್ಮಿಕ ಚಳುವಳಿಯ ಹಾಗೂ ಅನುಭವ ಮಂಟಪದ ಚಳುವಳಿಯ ಫಲ ಶೃತಿಯೇ ವಚನ ಸಾಹಿತ್ಯ. ಶರಣರು ವರ್ಗಭೇದ, ವರ್ಣಭೇದ, ಲಿಂಗ ಭೇದ ಹಾಗೂ ಸರ್ವ ಶೋಷಣೆಗಳಿಗೂ ಮುಕ್ತವಾದ ಸ್ವಾತಂತ್ರ್ಯ, ಸಮಾನತೆ, ಹಾಗೂ ಭಾತ್ರತ್ವದ ತಳಹದಿಯ ಮೇಲೆ ಸುಂದರ ಹಾಗೂ ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದರು. ಅಂದಿನ ಕಾಲದ ಆಳರಸರ, ಪುರೋಹಿತ ವರ್ಗದವರ, ಅಧಿಕಾರ ವರ್ಗದವರ ವ್ಯಾಪಾರಸ್ಥರ ಕಪಿಮುಷ್ಠಿಯಿಂದ; ಶ್ರಮಜೀವಿಗಳನ್ನು, ದುಡಿಯುವ ಕಾಯಕನಿಷ್ಠರನ್ನು ಶೋಷಣೆಯಿಂದ ಬಿಡುಗಡೆಗೊಳಿಸುವುದು ಶರಣರ ಮೂಲ ಧ್ಯೇಯವಾಗಿತ್ತು. ಕಾಯಕ ಜೀವಿಗಳ ಮೇಲೆ ಅನಾವಶ್ಯಕವಾಗಿ ತೆರಿಗೆ ವಿಧಿಸುವುದನ್ನು ಶರಣರು ವಿರೋಧಿಸಿದರು ಎಂದು ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಸಿದ್ದಲಿಂಗ ದಬ್ಬಾ ಅಭಿಪ್ರಾಯ ಪಟ್ಟರು.
ಚಿಂಚೋಳಿ ತಾಲೂಕ ಶರಣ ಸಾಹಿತ್ಯ ಪರಿಷತ್ತು ಇಲ್ಲಿನ ಹಾರಕೂಡದ ಶ್ರೀ ಚನ್ನಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ ವಿಶೇಷ ಉಪನ್ಯಾಸದಲ್ಲಿ ಮೇಲಿನಂತೆ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಮಲ್ಲಿಕಾರ್ಜುನ ಪಾಲಾಮೂರ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಚನ್ನವೀರ ಕಲ್ಲೂರ, ಆಡಳಿತಾಧಿಕಾರಿ ಗೀತಾರಾಣಿ ಐನೋಳಿ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ದೇಗಲಮಡಿ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ನಾಗೇಶ್ ಬಿ ಶೀಲವoತ ಹಾಗೂ ರಾಮಚಂದ್ರ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರ ಪ್ರಭುಲಿಂಗಯ್ಯ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಐನೋಳಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶರಣಯ್ಯ ಸ್ವಾಮಿ ಅಲ್ಲಾಪುರ ಐನೂಲಿ ವಚನ ಪ್ರಾರ್ಥನೆ ನಡೆಸಿಕೊಟ್ಟರು.
ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ್ ಬಂಟನಹಳ್ಳಿ ಉಪನ್ಯಾಸಕರು ನೆರವೇರಿಸಿದರು. ಉಪನ್ಯಾಸಕ ಶಶಿಕಾಂತ ಪಂಚಾಳ ಅವರು ವಂದಿಸಿದರು.