ಹಳೆ ಶಹಾಬಾದದಿಂದ ಕಲಬುರಗಿಗೆ ಬಸ್ ಓಡಾಟ ವ್ಯವಸ್ಥೆ

0
42

ಕಲಬುರಗಿ:ಹಳೆ ಶಹಾಬಾದಿಂದ ಕಲಬುರಗಿಗೆ ಬಸ್ ವ್ಯವಸ್ಥೆ ಮಾಡುವ ಮೂಲಕ ಶಾಸಕ ಬಸವರಾಜ ಮತ್ತಿಮಡು ಅವರು ಇಲ್ಲಿನ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದು ಬಿಜೆಪಿ ಮುಖಂಡ ಚಂದ್ರಕಾಂತ ಗೊಬ್ಬೂರಕರ್ ಹೇಳಿದರು.

ಅವರು ಸೋಮವಾರ ನಗರದ ಹಳೆಶಹಾಬಾದಿಂದ ಕಲಬುರಗಿಗೆ ನೂತನ ಬಸ್ ಓಡಾಟ ವ್ಯವಸ್ಥೆ ಆಗಿರುವುದರಿಂದ ಬಸ್ ಚಾಲನೆಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಕಲಬುರಗಿದಿಂದ ವಾಯಾ ನಾಗನಳ್ಳಿ,ನಂದೂರ,ಮರತೂರ,ತರನಳ್ಳಿ,ಹಳೆ ಶಹಾಬಾದ,ಶಹಾಬಾದ ತಲುಪುವದು. ನಂತರ ಶಹಾಬಾದದಿಂದ ವಾಯಾ ಹಳೆ ಶಹಾಬಾದ,ತರನಳ್ಳಿ,ಮರತೂರ,ನಂದೂರ, ನಾಗನಳ್ಳಿ, ಕಲಬುರಗಿಗೆ ತಲುಪುವದು. ಕಲಬುರಗಿಗೆ ಬಸ್ ಸೌಲಭ್ಯಕ್ಕಾಗಿ ಗ್ರಾಮಸ್ಥರ ಹಾಗೂ ವಿಧ್ಯಾರ್ಥಿಗಳ ಬಹುದಿನಗಳ ಬೇಡಿಕೆಯನ್ನು ಶಾಸಕರಾದ ಬಸವರಾಜ ಮತ್ತಿಮಡು ಈಡೇರಿಸಿದಂತಾಗಿದೆ.ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಬಸ್‍ಗೆ ವಿಶ್ವರಾಧ್ಯ ಮಠದ ವಿಜಯಕುಮಾರ್ ಸ್ವಾಮಿ ಪೂಜೆ ಸಲ್ಲಿಸಿ, ಚಾಲಕ ಮತ್ತು ನಿರ್ವಾಹಕರಿಗೆ ಸನ್ಮಾನಿಸಿದರು. ಶಿವುಗೌಡ ಪಾಟೀಲ, ಶ್ರೀಶೈಲಪ್ಪ ಬೆಳಮಗಿ, ಶಿವರಾಜ ಪಾರಾ, ಶರಣಪ್ಪ ಕೊಡದೂರ, ಬಸವರಾಜ ತರನಳ್ಳಿ, ದುರ್ಗಪ್ಪ ಪವಾರ, ಸಿದ್ರಾಮ ಕುಸಾಳೆ, ರವಿ ರಾಠೊಡ, ಸಂತೋಷ ಪಾಟೀಲ, ಅಮರ ಸಿನ್ನೂರ,ಮಲ್ಲಿಕಾರ್ಜುನ ಚಂದನಕೆರಿ, ಸುಭಾμï ದ್ಯಾಮಗೊಂಡ, ದೆವಿಂದ್ರಪ್ಪ ಸಿನ್ನೂರ, ಬಸವರಾಜ ಬಿರಾದಾರ,ಶ್ಯಾಮ ದೇವಕರ, ಅಬೀದ ಗುತ್ತೆದಾರ, ಮಲ್ಲಿಕಾರ್ಜುನ ವಾಲಿ ,ಶಿವಕುಮಾರ ನಾಟಿಕಾರ, ಲಾಲಹಮದ ಶಕಮತ್, ರಹೀಮಸಾಹೇಬ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here