ಭಾಲ್ಕಿ; ಮಹಾಶಿವರಾತ್ರಿಯ ನಿಮಿತ್ಯ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸನ್ನಿಧಾನದಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವವಹಿಸಿ, ಮಹಾಶಿವರಾತ್ರಿ ನಮ್ಮೆಲ್ಲರಿಗೆ ಅತ್ಯಂತ ಶ್ರದ್ಧೆಯ ಪರ್ವವಾಗಿದೆ. ನಾವು ದಿನನಿತ್ಯ ಮನೆಗಳಲ್ಲಿ ಇಷ್ಟಲಿಂಗ ಪೂಜೆ ಮಾಡುತ್ತೇವೆ. ವರ್ಷಕ್ಕೊಮ್ಮೆ ಮಹಾಶಿವರಾತ್ರಿಯ ದಿನದಂದು ಸಾಮೂಹಿಕವಾಗಿ ಇಷ್ಟಲಿಂಗ ಪೂಜೆಯನ್ನು ಮಾಡುವ ಮೂಲಕ ನಮ್ಮ ಶ್ರದ್ಧೆ, ಭಕ್ತಿಯಿಂದ ಸಂಭ್ರಹಿಸಬೇಕು.
ಆ ದಿಶೆಯಲ್ಲಿ ನಮ್ಮ ಹಿರಿಯರು ಈ ಒಂದು ಪರಂಪರೆ ಹಾಕಿಕೊಂಡು ಬಂದಿದ್ದಾರೆ. ವಿಶೇಷವಾಗಿ ಸದ್ಗುರುಗಳ ದಿವ್ಯಸಾನಿಧ್ಯದಲ್ಲಿ ಸಾಮೂಹಿಕ ಲಿಂಗಪೂಜೆ ಮಾಡುವುದು ಅತ್ಯಂತ ಸೌಭಾಗ್ಯದ ಸಂಗತಿಯಾಗಿದೆ. ಅದಕ್ಕಾಗಿ ತಾವೆಲ್ಲರೂ ಶ್ರೀ ಚನ್ನಬಸವಾಶ್ರಮದ ಶರಣ ಕುಂಬಾರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 1-00 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನುಡಿದರು. ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಬಸವರಾಜ ಮರೆ, ಶಶಿಧರ ಕೋಸಂಬೆ, ಮಲ್ಲಮ್ಮ ಆರ್. ಪಾಟೀಲ, ಸಾವಿತ್ರಿ ಪಾಟೀಲ, ಮಹಾನಂದ ದೇಶಮುಖ, ಮಲ್ಲಿಕಾರ್ಜುನ ಹಲ್ಮಂಡಗೆ, ಚನ್ನಬಸವ ಬಳತೆ, ಸಿದ್ರಾಮಪ್ಪ ವಂಕೆ, ಸುಭಾಷ ಕಾರಾಮುಂಗೆ, ಶಂಭುಲಿಂಗ ಕಾಮಣ್ಣ ಮುಂತಾದ ಗಣ್ಯರು ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು. ಶಾಂತಯ್ಯ ಸ್ವಾಮಿ ವಂದಿಸಿದರು.