ಕಲಬುರಗಿ: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯ ಮಹಿಳಾ ಉಪಾಧ್ಯಕ್ಷೆ ಅನುಪಮಾ ನೇತೃತ್ವದಲ್ಲಿ ಬುಧವಾರ ತಾಪಂ ಸಾಮರ್ಥ ಸೌಧದಲ್ಲಿ ಕಲಬುರಗಿ ತಾಲ್ಲೂಕು ಘಟಕ ಅಸ್ತಿತ್ವಕ್ಕೆ ತರಲಾಯಿತು.
ಮುಂದಿನ ಮೂರು ವರ್ಷದ ಆಡಳಿತಾವಧಿವರೆಗೆ ನೂತನ ಪದಾಧಿಕಾರಿಗಳನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು.
ಸುಧಾ ಕೆ. ದಂಡೆ (ಅಧ್ಯಕ್ಷ), ಸಂದೀಪ ಜಿಂಧೆ (ಉಪಾಧ್ಯಕ್ಷ), ಪ್ರೇಮಾ ದೊಡ್ಮನಿ (ಮಹಿಳಾ ಉಪಾಧ್ಯಕ್ಷ), ರವಿ ಸಣ್ಣದನಿ (ಸಂಘಟನಾ ಕಾರ್ಯದರ್ಶಿ), ರಾಮಚಂದ್ರ ಮಸರಕಲ್ (ಕ್ರೀಡಾ ಕಾರ್ಯದರ್ಶಿ), ಪ್ರೀತಿರಾಜ (ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ), ಬಸವರಾಜ್ ಮಲಶೆಟ್ಟಿ (ಖಜಾಂಚಿ), ಸಿದ್ದರಾಮ ಬಿ. ಚಿಂಚೋಳಿ (ಪ್ರಧಾನ ಕಾರ್ಯದರ್ಶಿ). ಈ ಸಂದರ್ಭದಲ್ಲಿ ಫಿರೋಜಾಬಾದ್ ಗ್ರಾಪಂ ಪಿಡಿಓ ಸುರೇಶ ಬೆಳಗುಂಪಿ ಸೇರಿ ಅನೇಕ ಪಿಡಿಓಗಳು ಉಪಸ್ಥಿತರಿದ್ದರು