ಕಲ್ಯಾಣ ಕರ್ನಾಟಕ ಉತ್ಸವ ಲಾಂಛನ, ಪೋಸ್ಟರ್, ವೆಬ್‍ಸೈಟ್ ಬಿಡುಗಡೆ

0
16

ಕಲಬುರಗಿ: ಕಲ್ಯಾಣ ಕರ್ನಾಟಕ ವಿಮೋಚನೆಯಾಗಿ 75 ವರ್ಷ ಪೂರೈಸಿರುವುದರಿಂದ ಕಲ್ಯಾಣ ಕರ್ನಾಟಕ ಆಜಾದಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗುಲ್ಬರ್ಗ ವಿವಿ ಆವರಣದಲ್ಲಿ ಫೆ. 24,25 ಹಾಗೂ 26ರಂದು ಮೂರು ದಿನಗಳವರೆಗೆ ಕಲ್ಯಾಣ ಕರ್ನಾಟಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

ಗುರುವಾರ ಸಂಜೆ ಮಂಡಳಿ ಸಭಾಂಗಣದಲ್ಲಿ ಉತ್ಸವದ ಲಾಂಛನ, ಪೋಸ್ಟರ್ ಹಾಗೂ ವೆಬ್‍ಸೈಟ್ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ಸವದ ಪ್ರಾರಂಭದಲ್ಲಿ ಏಳು ಜಿಲ್ಲೆಗಳ ಕಲಾ ತಂಡಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಗುಲ್ಬರ್ಗ ವಿವಿವರೆಗೆ ಜಾನಪದ ಮೆರವಣಿಗೆ ಮೂಲಕ ತೆರಳಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟನೆ ಇಲ್ಲವೇ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೇಂದ್ರ ಸಚಿವ ಭಗವಂತ ಖೂಬಾ ಇನ್ನುಳಿದ ಸಚಿವರು ಹಾಗೂ ಶಾಸಕರು ಆಗಮಿಸಲಿದ್ದಾರೆ ಎಂದರು.

ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 100 ಬಸ್ ಒದಗಿಸುವಂತೆ ಕೋರಲಾಗಿದೆ ಎಂದು ಅವರು ವಿವರಿಸಿದರು.

ಸಾಹಸ ಕ್ರೀಡೆಗಳಾದ ಜಿಪ್ ಲೈನಿಂಗ್, ರ್ಯಾಪೆಲಿಂಗ್, ವಾಲ್ ಕ್ಲೈಂಬಿಂಗ್, ನಗರದ ಅಪ್ಪನ ಕೆÀರೆಯಲ್ಲಿ ಫೆ. 24, 25ರಂದು ಜಲ ಕ್ರೀಡೆಗಳಾದ ಕಯಾಕಿಂಗ್ ತರಬೇತಿ ಆಯೋಜಿಸಲಾಗಿದೆ. ಕಲಬುರಗಿ ವಿಮಾನ ನಿಲ್ದಾಣದ ಆವರಣದಲ್ಲಿ ಪ್ಯಾರಾ ಮೋಟರಿಂಗ್ ಹಾಗೂ ಹೆಲಿಕಾಪ್ಟರ್ ರೈಡ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಕೆ..ಕೆ.ಆರ್.ಟಿ.ಸಿ. ಎಂ.ಡಿ. ಎಮ.ರಾಚಪ್ಪ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಂಡಳಿ ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಜಂಟಿ ನಿರ್ದೇಶಕಿ ಪ್ರವಿಣಪ್ರಿಯಾ ಸೇರಿದಂತೆ ಉತ್ಸವದ ವಿವಿಧ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು ಇದ್ದರು.

ಉತ್ಸವದಲ್ಲಿ ಏನಿರುತ್ತವೆ?; ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ಗಾಳಿಪಟ ಉತ್ಸವ, ಮಕ್ಕಳ ಉತ್ಸವ, ಮಹಿಳಾ ಉತ್ಸವ, ಕಲಾ ಶಿಬಿರ, ಶಿಲ್ಪಕಲಾ ಶೀಬಿರ, ಮಹಿಳಾ ಸ್ವ ಸಹಾಯ ಸಂಘಗಳಿಂದ ಪ್ರದರ್ಶನ, ಪರಂಪರೆ, ಕಲೆ, ಜೀವ ವೈವಿಧ್ಯತೆ ಪ್ರದರ್ಶನ, ಫಲ ಪುಷ್ಪ ಪ್ರದರ್ಶನ, ಸಿರಿಧಾನ್ಯಗಳ ಮೇಳ ಹಾಟ್ ಏರ್ ಬಲೂನ್ ಇತ್ಯಾದಿ ಕಾರ್ಯಕ್ರಮಗಳಿರುತ್ತವೆ ಎಂದು ರೇವೂರ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ Kalyanakarnatakautsav.com ವೆಬ್ ಸೈಟ್ ವೀಕ್ಷಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here