ಕಲಬುರಗಿ: ಬೊಮ್ಮಾಯಿ ಮಂಡಿಸಿರುವ ಬಜೆಟ್‍ನಲ್ಲಿ ಬರೀ ಭರವಸೆಗಳೇ ತುಂಬಿವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಬಿಜೆಪಿಗರು ಸುಳ್ಳಿನ ಬಜೆಟ್ ಮುಖಾಂತರ ಇಡೀ ರಾಜ್ಯದ ಜನರಿಗೆ ಮತ್ತೊಮ್ಮೆ ಕಿವಿ ಮೇಲೆ ಹೂವು ಇಡುತ್ತಿz್ದÁರೆಂದು ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಟೀಕಿಸಿದ್ದಾರೆ.
ಕೆಕೆಆರ್‍ಡಿಬಿಗೆ 5 ಸಾವಿರ ಕೋಟಿ ರು ಗೋಷಿಸಿದ್ದಾರೆ. ಮೊದಲ ಗೋಷಿಸಿದ್ದ 3 ಸಾವಿರ ಕೋಟಿ ರುಪಾಯಿ ಹಣವೇ 2 ವರ್ಷವಾದರೂ ಬಂದಿಲ್ಲ, ಬಂದ ಹಣ ವೆಚ್ಚವಾಗಿಲ್ಲ. ತೀರ ಈಚೆಗೆ ಮಂಡಳಿಯ ವೆಚ್ಚ ಮಾಡಿದ ಹಣ ಕೇವಲ ಶೇ. 7 ಮಾತ್ರ. ಮಂಡಳಿಯಲ್ಲಿ ಸಿಬ್ಬಂದಿ ಕೊರತೆ. ಇವನ್ನೆಲ್ಲ ಸರಿಪಡಿಸೋದು ಬಿಟ್ಟು ಬರೀ ಕಣ್ಣಿಗೆ ಮಣ್ಣೆರೆಚುವಂತೆ ಸಾವಿರ ಸಾವಿರ ಕೋಟಿ ಘೋಷಣೆ ಮಾಡುತ್ತಿದ್ದಾರಷ್ಟೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಜೆಟ್ ಗಾತ್ರ ದೊಡ್ಡದೆಂದು ದೊಡ್ಡದಾಗಿ ಹೇಳಿದ್ದಾರೆ. ವಾಸ್ತವದಲ್ಲಿ ಬಿಜೆಪಿಯ ಈ 40% ಕಮೀಷನ್ ಸರ್ಕಾರ ಕೇವಲ ಮೂರೂವರೆ ವರ್ಷದಲ್ಲಿ 2,54,760 ಕೋಟಿ ರೂ. ಸಾಲ ಮಾಡುವ ಮೂಲಕ ರಾಜ್ಯದ ಜನರನ್ನು ಸಾಲದ ಕೋಪಕ್ಕೆ ತಳ್ಳುತ್ತಿದೆ. ರಾಜ್ಯದ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಇದು ಹೀಗೇ ಪೆÇಳ್ಳು ಭರವಸೆ ನೀಡುತ್ತಲೇ ಜನರನ್ನು ಸತಾಯಿಸುತ್ತದೆ ಎಂದೂ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ನಯಾಪೈಸೆ ಕೆಲಸ ಮಾಇಲ್ಲ. ರೈತರ ಆದಾಯ ಹೆಚ್ಚಳ ಮಾಉವ ಭರವಸೆ ನೀಡಿದರು, ಅದು ವಾಸ್ತವದಲ್ಲಿ ಈಡೇರಿಲ್ಲ. ಕರ್ನಾಟಕ ರೈತರ ಆತ್ಮಹತ್ಯೆಲ್ಲಿ ದೇಶದ ಗಮನ ಸೆಳೆದಿದೆ. ಇದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ತೊಗರಿ ರೈತರೇ 10 ರಿಂದ 15 ಜನ ಸಾವನ್ನಪ್ಪಿದ್ದರೂ ಕೇಳೋರಿಲ್ಲದಂತಾಗಿದೆ. ತೊಗರಿ ಬೇಳೆ ಅಭಿವೃದ್ಧಿಗೆ ಯಾವುದೇ ಕೊಡುಗೆ ಈ ಸರ್ಕಾರ ಗೋಷಿಸಿಲ್ಲವೆಂದು ಅಲ್ಲಂಪ್ರಭು ಪಾಟೀಲ್ ದೂರಿದ್ದಾರೆ.