ಕಲಬುರಗಿ; ಸಿಎಂ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ದೆಸೆ ಇಲ್ಲದ ಬಜೆಟ್ ಆಗಿದ್ದು ಇದರಿಂದ ರಾಜ್ಯದ ರೈತರು, ಸಾಮಾನ್ಯ ಜನತೆ ತೀವ್ರ ನಿರಾಶರಾಗಿದ್ದಾರೆಂದು ವಿಧಾನಸಬೆ ವಿರೋಧ ಪಕ್ಷ ಮುಖ್ಯ ಸಚೇತಕರು, ಜೇವರ್ಗಿ ಶಾಸಕರು ಆಗಿರುವ ಡಾ. ಅಜಯ್ ಸಿಂಗ್ ಟೀಕಿಸಿದ್ದಾರೆ.
ತೊಗರಿ ರೈತರು ಹಾನಿಗೊಳಗಾಗಿದ್ದಾರೆ. 1 ಸಾವಿರ ಕೋಟಿ ರು ಪ್ಯಾಕೇಜ್‍ಗೆ ನಾವು ಬೆಳಗಾವಿ ಸದನದಲ್ಲಿ ಆಗ್ರಹಿಸಿz್ದÉೀವು. ಆದರೆ ಈ ಸರ್ಕಾರ ರೈತರ ನೋವು- ಯಾತನೆಗೆ ಸ್ಪಂದಿಸಿಲ್ಲ. ಹೆಕ್ಟರ್‍ಗೆ 10 ಸಾವಿರ ರುಪಾಯಿ ಪರಿಹಾರ ಕೊಡೋದಾಗಿ ಹೇಳಿದ್ದರೂ ಇನ್ನೂ ನೀಡಿಲ್ಲ. ಈ ಧೋರಣೆಯಿಂದಾಗಿ ರೈತ ವಿರೋಧಿ ಎಂದು ಸಾಬೀತು ಪಡಿಸಿದೆ. ಕೆಕೆಆರ್‍ಡಿಬಿಗೆ 5 ಸಾಇರ ಕೋಟಿ ಘೋಷಿಸಿದೆ, ಮುಚಿನ ಗೋಷಣೆಯಾದ 3 ಸಾವಿರ ಕೋಟಿ ಹಣವೇ ಬಿಡುಗಡೆಯಾಗಿಲ್ಲ, ಇದೀಗ 5 ಸಾವಿರ ಕೋಟಿ ರು ಎಂದು ಹೇಳಿದ್ದಾರೆ, ಇದು ಸುಳ್ಳಿನ ಕಂತೆ ಎಂದು ಡಾ. ಅಜಯ್ ಸಿಂಗ್ ಲೇವಡಿ ಮಾಡಿದ್ದಾರೆ.
ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಸಾವಿರಾರು ಕೋಟಿ ರು ಅಗತ್ಯವಿದ್ದರೂ ಯೂಕೆಪಿಗೆ ಕಮ್ಣೊರೆಸುವ ತಂತ್ರವಾಗಿ 5 ಸಾವಿರ ಕೋಟಿ ರು ನೀಡಿದ್ದಾರೆ. ಜೇವರ್ಗಿ ತಾಲೂಕಿನ ಮಹತ್ವದ ಮಲ್ಲಾಬಾದ ಏತ ನೀರಾವರಿ ಯೋಜನೆಗೆ ಹಣ ಕೊಡೋದಾಗಿ ಸಿಎಂ ಬೊಮ್ಮಾಯಿ, ನೀರಾವರಿ ಸಚಿವ ಗೋವಿಂದ ಕಾರಜೋಳ ಬೆಳಗಾವಿ ಸದನದಲ್ಲಿ ಭರªಸೆ ನೀಡಿದ್ದರು. ಆದರೆ ನುಡಿದಂತೆ ನಡೆಯಲೇ ಇಲ್ಲ. ನಯಾಪೈಸೆ ಹಣ ಬಜೆಟ್ಟಲ್ಲಿ ನೀಡಲಾಗಿಲ್ಲವೆಂದು ಡಾ. ಅಜಯ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟು ಬಜೆಟ್ ಗಾತ್ರ 3,09,182 ಕೋಟಿ, ಈ ವರ್ಷದ ಅಂತ್ಯಕ್ಕೆ ಸರ್ಕಾರ ಮಾಡಿರುವ ಸಾಲ 5,64,896 ಕೋಟಿ ರೂ. ಆಗುತ್ತದೆ ಎಂದು ಹೇಳಿz್ದÁರೆ. ಸಿದ್ದರಾಮಯ್ಯ ನವರ ಸರ್ಕಾರದ ಕೊನೆಯವರೆಗೆ ರಾಜ್ಯದ ಮೇಲೆ 2 ಲP್ಷÀದ 42 ಸಾವಿರ ಕೋಟಿ ರೂ. ಸಾಲ ಇತ್ತು, ಆದರೆ ಈಗ ಏಕದಂ 3 ಲP್ಷÀದ 22 ಸಾವಿರ ಕೋಟಿ ಸಾಲ ಹೆಚ್ಚಾಗಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ.
2018-19ರಲ್ಲಿ ಸಮ್ಮಿಶ್ರ ಸರ್ಕಾರ ಮಾಡಿದ್ದ ಸಾಲ 41,914 ಕೋಟಿ ರೂ. ನಮ್ಮ ಕಾಂಗ್ರೆಸ್ ಪP್ಷÀದ ಸರ್ಕಾರದ 5 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಒಟ್ಟು ಸಾಲ 1,16,512 ಕೋಟಿ ರೂ. ಆದರೆ ಬಿಜೆಪಿ ಸರ್ಕಾರ ಕಳೆದ ಮೂರೂವರೆ ವರ್ಷದಲ್ಲಿ 2,54,760 ಕೋಟಿ ರೂ. ಸಾಲ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರೆಸಿದೆ. ಸಾಲಗಾರ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದ್ದು ಪ್ರತಿ ಕನ್ನಡಿಗನ ತಲೆ ಮೇಲೆ 81 ಸಾವಿರ ರುಪಾಯಿ ಸಾಲ ಬಿಜೆಪಿ ಸರ್ಕಾರ ಹೊರೆಸಿದೆ ಎಂದು ಡಾ. ಅಜಯ್ ಸಿಂಗ್ ದೂರಿದ್ದಾರೆ.