ಇಷ್ಟಲಿಂಗ ಪೂಜೆಯಿಂದ ಮಾನಸಿಕ ನೆಮ್ಮದಿ

0
13

ಭಾಲ್ಕಿ; ಪಟ್ಟಣದ ಚನ್ನಬಸವಾಶ್ರಮದ ಕುಂಬಾರ ಗುಂಡಯ್ಯಾ ಕಲ್ಯಾಣ ಮಂಟಪದಲ್ಲಿ ಮಹಾಶಿವರಾತ್ರಿಯ ನಿಮಿತ್ಯ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ದಿವ್ಯ ಸನ್ನಿಧಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು.

ಸಾನಿಧ್ಯ ವಹಿಸಿದ ಹಿರಿಯ ಪೂಜ್ಯರು, ವಿಶ್ವಗುರುಬಸವಣ್ಣನವರು ನಮ್ಮ ಕರಸ್ಥಲಕ್ಕೆ ತಂದುಕೊಟ್ಟ ಇಷ್ಟಲಿಂಗ ನಿರಾಕಾರ ಪರಮಾತ್ಮನ ಕುರುಹು. ಅದನ್ನು ದಿನನಿತ್ಯ ಪೂಜಿಸುವ ಮೂಲಕ ನಾವು ಮಾನಸಿಕ ನೆಮ್ಮದಿಯನ್ನು ಪಡೆಯುತ್ತೇವೆ. ಶರಣರಿಗೆ ದಿನನಿತ್ಯವೇ ಶಿವರಾತ್ರಿಯಾಗಿದೆ. ನಾವು ದಿನನಿತ್ಯ ವ್ಯೆಕ್ತಿಗತ ಲಿಂಗಪೂಜೆ ಮಾಡಿಕೊಳ್ಳುತ್ತೇವೆ, ಮಹಾಶಿವರಾತ್ರಿಗೆ ಸಾಮೂಹಿಕವಾಗಿ ಲಿಂಗಪೂಜೆ ಮಾಡಿಕೊಳ್ಳುತ್ತೇವೆ.

Contact Your\'s Advertisement; 9902492681

ಸಾಮೂಹಿಕವಾಗಿ ಲಿಂಗಪೂಜೆ ಮಾಡಿಕೊಳ್ಳುವುದರಿಂದ ನಮೆಲ್ಲರಲ್ಲಿ ದೈವಿ ಕಳೆಯನ್ನು ತುಂಬುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಸ್ವಲ್ಪ ಸಮಯ ನಾವು ನಮಗಾಗಿ ಕೊಡಬೇಕು. ಸುಪ್ರಭಾತ ಸಮಯದಲ್ಲಿ ಲಿಂಗಯೋಗ ಮಾಡುವ ಮೂಲಕ ನಾವು ಅಂತರ್ಮೂಖವಾಗಬೇಕು. ಆದರಿಂದ ಮಾನಸಿಕ ನೆಮ್ಮದಿ ಸಹನೆ ತಾಳ್ಮೆ ಕರುಣೆ ಪ್ರೀತಿ ಮುಂತಾದ ಗುಣಗಳು ಬೆಳೆದು ನಮ್ಮ ವ್ಯಕ್ತಿತ್ವ ವಿಕಸಿತವಾಗುತ್ತದೆ ಎಂದು ನುಡಿದರು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದರು. ಸಾಮೂಹಿಕ ಇಷ್ಟಲಿಂಗಪೂಜೆಯಲ್ಲಿ ಸಾವಿರಕ್ಕಿಂತ ಹೆಚ್ಚಿನ ಸದ್ಭಕ್ತರು ಪಾಲ್ಗೊಂಡು ಲಿಂಗಾನಂದದ ಅನುಭೂತಿಯನ್ನು ಅನುಭವಿಸಿದರು.

ಸಮಾರಂಭದ ಮೊದಲಿಗೆ ಧರ್ಮಗುರು ಬಸವಣ್ಣನವರ ಪೂಜೆಯನ್ನು ಶರಣೆ ಸುಶೀಲಾದೇವಿ ವೈಜಿನಾಥ ಉಪ್ಪಿನ್, ಸುನೀಲಕುಮಾರ ಹೊನ್ನಾಳೆ, ಚಂದ್ರಕಾಂತ ಪಾಟೀಲ, ಕೀರ್ತಿ ಶಶಿಧರ ಕೊಸಂಬೆ, ಜೈಪ್ರಕಾಶ ಕುಂಬಾರ, ರಮೇಶ ಕರ್ಕಾಳೆ, ರಾಜಕುಮಾರ ಹೊಸದೊಡ್ಡೆ ಇವರಿಂದ ನೆರವೆರಿತು. ಸಮಾರಂಭದ ಉದ್ಘಾಟನೆಯನ್ನು ವಲಯ ಅರಣ್ಯ ಅಧಿಕಾರಿಗಳಾದ ಎಸ್. ಎಮ್. ಖಾದ್ರಿ ಇವರಿಂದ ಜರುಗಿತು. ಶಿವಕುಮಾರ ಪಂಚಾಳ, ನವಲಿಂಗ ಪಾಟೀಲ, ಯಲ್ಲನಗೌಡ ಇವರಿಂದ ವಚನ ಸಂಗೀತ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here