ಮಾನವ ವಿಶ್ವ ಮಾನವನಾಗಲು ಬೇಕಾದ ಮೌಲ್ಯಗಳನ್ನು ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ನೀಡಿದ್ದಾರೆ

0
35

ಕಲಬುರಗಿ : ಮಾನವ ವಿಶ್ವ ಮಾನವನಾಗಲು ಬೇಕಾದ ಜೀವನ ಮೌಲ್ಯಗಳನ್ನು ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ನೀಡಿದ್ದಾರೆ ಎಂದು ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕುಂಬಾರ ಸುಲೇಪೇಟ ಹೇಳಿದರು.

ನಗರದ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಸರ್ವಜ್ಞ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಇಡೀ ಸಾರ ಹಿಡಿದಿಟ್ಟು ಅಮೂಲ್ಯ ಸಾಹಿತ್ಯವನ್ನು ನೀಡಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಕವಿ ಎಂದು ತಿಳಿಸಿದರು ,ಕವಿ ಸರ್ವಜ್ಞ ಜನರಿಗೆ ಸಾಮಾನ್ಯ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಸೇರಿದಂತೆ ಹಲವು ಅಂಕು ಡೊಂಕುಗಳನ್ನು ತಿದ್ದುವಲ್ಲಿ ಶ್ರಮಿಸಿದ್ದಾರೆ.

Contact Your\'s Advertisement; 9902492681

ಭಾರತ ದೇಶದಲ್ಲಿ ವೇದ, ಉಪನಿಷತ್ಗಳನ್ನು ಜನರಿಗೆ ತಿಳಿಯುವ ಭಾಷೆಯಲ್ಲಿ ತ್ರಿಪದಿ ವಚನಗಳ ಮೂಲಕ ತಿಳಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ. ಸರ್ವಜ್ಞ ಹೇಳದ ವಿಷಯವಿಲ್ಲ. ಸಮಾಜದಲ್ಲಿ ಜಾತಿ ಪದ್ಧತಿ, ವೈದ್ಯ ಪದ್ಧತಿ, ಆಹಾರ ಪದ್ಧತಿ ಸೇರಿದಂತೆ ಹಲವು ವಿಚಾರ ಕುರಿತು ವಚನಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸರ್ವಜ್ಞರ ವೈಚಾರಿಕ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸರ್ವಜ್ಞರ ಬಗ್ಗೆ ಶೋಧನೆ ಆಗಬೇಕು. ಕುಂಬಾರ ಸಮಾಜ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯದವರ ಉದ್ಯೋಗ ನಶಿಸಿ ಹೋಗುತ್ತಿದ್ದು, ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ಉಪನಿರ್ದೇಶಿಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ವಿಠ್ಠಲ ಕುಂಬಾರ, ಭಿಮಾಶಂಕರ ಕುಂಬಾರ, ಚಂದ್ರಕಾಂತ ಕುಂಬಾರ, ಶಿವಾನಂದ ಕುಂಬಾರ, ಪತ್ರಕರ್ತ ಅಕ್ರಂಪಾಶಾ ಮೋಮಿನ್, ಮಲ್ಲು ಕುಂಬಾರ, ಸಂಜೀವ ಕುಂಬಾರ, ಗುರು ಕುಂಬಾರ, ಪಂಡರಿ ಕುಂಬಾರ, ಶಿವಾನಂದ ಕುಂಬಾರ, ಪರಮೇಶ್ವರ ಕುಂಬಾರ, ಶಿವು ಕುಂಬಾರ, ವಿಠ್ಠಲ ಕುಂಬಾರ ಸೀತನೂರ, ಸೇರಿದಂತೆ ಸಮಾಜದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಫೆ 26ಕ್ಕೆ ಸಿ.ಎಂ ಗೆ ಅಹ್ವಾನ: ಫೆ 26 ರಂದು ಜಿಲ್ಲಾ ಕುಂಬಾರ ಸಮಾಜದಿಂದ ಕಲಬುರಗಿ ನಗರದ ವಿರಶೈವ ಕಲ್ಯಾಣ ಮಂಟಪದಲ್ಲಿ ಸರ್ವಜ್ಞ ಜಯಂತಿ ಹಾಗೂ ಕುಂಬಾರ ಸಮಾಜದ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಿಗೆ ಅಹ್ವಾನಿಸಲಾಗಿದೆ. –  ಶಿವಶರಣಪ್ಪ ಕುಂಬಾರ, ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here