ಚಿತ್ತಾಪುರ: ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಫೇ.21 ಮಂಗಳವಾರ ಪಟ್ಟಣದಲ್ಲಿ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಯಂತೋತ್ಸವ ಸಮಿತಿಯ ಅಧ್ಯಕ್ಷ ಅನಿಲ ಯಂದೇ ಅವರು ತಿಳಿಸಿದ್ದಾರೆ.
ಪಟ್ಟಣದ ಹಿಂಗುಲಾಂಬಿಕಾ ದೇವಸ್ಥಾನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಾಜಿ ಮಹಾರಾಜರು ಪ್ರತಿ ಹಿಂದುವಿನ ಹೃದಯ ಸಾಮ್ರಾಟ ಆಗಿದ್ದಾರೆ.ಅತಿ ವಿಜೃಂಭಣೆಯಿಂದ,ಅದ್ದೂರಿಯಾಗಿ ಈ ವರ್ಷ ಬೃಹತ್ ಪ್ರಮಾಣದಲ್ಲಿ ಶೋಭಾ ಯಾತ್ರೆ ಮಾಡಲು ಸಮಿತಿಯ ವತಿಯಿಂದ ಹಮ್ಮಿಕೊಂಳ್ಳಲಾಗಿದೆ ಎಂದರು.
ಫೇ.21ರಂದು ಬೆಳಿಗ್ಗೆ 10:30ಕ್ಕೆ ಪಟ್ಟಣದ ಭುವನೇಶ್ವರಿ ಚೌಕ್ ನಲ್ಲಿ ಬೃಹತ್ ವೇದಿಕ ಕಾರ್ಯಕ್ರಮ ನಡೆಯುತ್ತದೆ.ಈ ಕಾರ್ಯಕ್ರಮದಲ್ಲಿ ಪಟ್ಟಣದ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು, ಅಳ್ಳೊಳ್ಳಿ ಸಾವಿರ ಮಠದ ಸಂಗಮನಾಥ ಸ್ವಾಮಿಗಳು,ದಿಗ್ಗಾಂವ ಕಾಂಚಗಾರ ಹಳ್ಳದ ಪಾರ್ವತಿ ಪರಮೇಶ್ವರ ಪೀಠರ ಮಲ್ಲಯ್ಯ ಮುತ್ಯಾ ಸೇರಿದಂತೆ ತಾಲ್ಲೂಕಿನ ಎಲ್ಲಾ ಮಠಾಧೀಶರು ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ.
ವೇದಿಕೆ ಕಾರ್ಯಕ್ರಮದ ನಂತರ ಭುವನೇಶ್ವರಿ ಚೌಕ್ ನಿಂತ ಬೃಹತ್ ಪ್ರಮಾಣದ ಶೋಭಾ ಯಾತ್ರೆ ಪ್ರಾರಂಭವಾಗಿ ಹೋಳಿ ಕಟ್ಟಾ,ಚಿತಾವಲಿ-ಷಾ ಚೌಕ್,ಕಪ್ಪಡ ಬಜಾರ್,ಜನತಾ ಚೌಕ್,ನಾಗಾವಿ ಚೌಕ್,ಸ್ಟೇಶನ್ ರಸ್ತೆ ಮೂಲಕ ಅಂಬೇಡ್ಕರ್ ವೃತ,ಬಸ್ ನಿಲ್ದಾಣ, ಬಸವೇಶ್ವರ ವೃತ ತಲುಪುವುದು.ಭವ್ಯ ಶೋಭಾ ಯಾತ್ರೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಶಿವಾಜಿ ಮಹಾರಾಜರ ಭಕ್ತರು,ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಶ್ವತರಾಮ ರಾಠೋಡ,ಮನೋಜಕುಮಾರ್ ರಾಠೋಡ, ಸುಭಾಷ ಗುತ್ತೇದಾರ್, ಪ್ರೇಮ್ ಪವಾರ್, ಮಲ್ಲಿಕಾರ್ಜುನ ಮುಗಳನಾಗಾಂವ,ರೋಹಿತ್ ಯಂದೇ,ಸಂಜು ಸೂರ್ಯವಂಶಿ,ಸಂತೋಷ ರಾಠೋಡ,ರವಿ ರಾಠೋಡ ಇದ್ದರು.