ತ್ರಿಕಾಲ ಜ್ಞಾನಿ ಸರ್ವಜ್ಞ ಇಂದಿಗೂ ಅಜರಾಮರ

0
18

ಕಲಬುರಗಿ:ತ್ರಿಕಾಲ ಜ್ಞಾನಿಯಾಗಿ,ವಾಸ್ತವಿಕೆ ಅರಿತು,ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವರಕವಿ ಸರ್ವಜ್ಞ ಇಂದಿಗೂ ಅಜರಾಮರವಾಗಿದ್ದಾರೆ ಎಂದು ಗ್ರೇಡ್ -2 ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.

ಅವರು ಶಹಾಬಾದ ನಗರದ ತಹಸೀಲ್ದಾರ ಕಛೇರಿಯಲ್ಲಿ ಮಂಗಳವಾರ ಕುಂಬಾರ ಸಮಾಜದ ಹಾಗೂ ಕಂದಾಯ ಇಲಾಖೆ ವತಿಯಿಂದ ಆಯೋಜಿಸಲಾದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ನಾಡಿನೆಲ್ಲಡೆ ಸಂಚರಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕಂಡ ಸತ್ಯವನ್ನು ನೇರವಾಗಿ ಹೇಳುವ ಮೂಲಕ ಸಮಾಜಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿದ್ಯೆ,ಜಾತಿ,ಕೃಷಿ,ಮಾತು,ದುಶ್ಚಟಗಳ ಕುರಿತು ವಚನಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.ಆದರೆ ಇಂದು ಗುಟಕಾ,ತಂಬಾಕು ಹಾಗೂ ಕುಡಿತ ಮೋಜಿಗೆ ಜನರು ಬಲಿಯಾಗುತ್ತಿದ್ದಾರೆ.ಆದ್ದರಿಂದ ಸರ್ವಜ್ಞನ ವಚನಗಳ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ನಡೆದರೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ತಹಸೀಲ್ದಾರ ಕಚೇರಿಯ ಸಿಬ್ಬಂದಿ ವರ್ಗ, ಕುಂಬಾರ ಸಮಾಜದ ತಾಲೂಕಾ ಅಧ್ಯಕ್ಷ ತಿಪ್ಪಣ್ಣ ಕುಂಬಾರ, ಭಂಕೂರ ಗ್ರಾಮದ ಕುಂಬಾರ ಸಮಾಜದ ಅಧ್ಯಕ್ಷ ಸಿದ್ದಪ್ಪ ಕುಂಬಾರ ಸೇರಿದಂತೆ ಸಮಾಜದ ಅನೇಕ ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here