ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಶರಣ ಚರಿತಾಮೃತ ಪ್ರವಚನ ಆರಂಭ

0
12

ಸುರಪುರ: ನಗರದ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಲಿಂ. ಮಲ್ಲಿಕಾರ್ಜುನ ಮಹಾಸ್ವಾಮಿಗಳ 47ನೇ ವರ್ಷದ ಸ್ಮರಣೋತ್ಸವ ಹಾಗೂ ಶರಣ ಚರಿತಾಮೃತ ಪ್ರಚನ ಮಂಗಳವಾರದಿಂದ ಆರಂಭಗೊಂಡಿದೆ.

ವ್ಮಠದ ಪ್ರಭುಲಿಂಗ ಮಹಸ್ವಾಮಿಗಳು ನೇತೃತ್ವವ, ಯಡ್ರಾಮಿಯ ಸಿದ್ದಲಿಂಗಮಹಾಸ್ವಾಮಿಗಳು ಉದ್ಘಾಟಿಸಿದರು. ಮಾನ್ವಿ ತಡಕಲ್ ವ್ಮಠದ ಶಿವಕುಮಾರ ಸ್ವಾಮಿ ಪ್ರಚನ ನೀಡಿದರು. ಶರಣು ಕುಮಾರ ಯಾಳಗಿ ಸಂಗೀತ, ನಾಗರಾಜ ತಬಲಾಸಾಥ ನೀಡಿದರು.

Contact Your\'s Advertisement; 9902492681

22 ರಂದು ರಾಷ್ಟ್ರ ಖ್ಯಾತಿಯ ಶಿಲ್ಪಿ ನಾಡೋಜ ಮಾನಯ್ಯ ಬಡಿಗೇರ. ಸನ್ಮಾನ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂಜೀವ ದರಬಾರಿ ಅತಿಥಿ, ಖೇಳಗಿ ಮಠದ ಶಿವ ಲಿಂಗೇಶ್ವರ ಮಹಾಸ್ವಾಮಿ ಸಾನಿಧ್ಯ, ಫೆ.26 ರಂದು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ವಿದ್ಯಾರ್ಥಿಗಳಿಗೆ ವಚನಗಾಯನ, ವೀರಶೈವ ಮಠಗಳಿಗೆ ಅರಸರ ಕೊಡುಗೆ ಕುರಿತು ಪ್ರಬಂಧ ಸ್ಪರ್ಧೆ, ಫೆ.27 ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣೆ, ರಕ್ತಧಾನ ಶಿಬಿರ, ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ ಉದ್ಘಾಟನೆ, ಡಾ| ಹರ್ಷವರ್ಧನ ರಫುಗಾರ, ಡಾ| ವಿ.ಎಲ್. ಚೌದ್ರಿ ಭಾಗವಹಿಸುವರು.

ಅದೇ ದಿನ ಸಂಜೆ 7 ಗಂಟೆಗೆ ಸ್ಪರ್ಧಾ ವಿಜೇತರರಿಗೆ ಬಹುಮಾನ ವಿತರಣೆ ಲಕ್ಷ್ಮೀಪುರ ಶ್ರೀಗಿರಿಮಠದ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸಾನಿಧ್ಯ, ರುಕ್ಮಾಪುರ ಶಾಂತಮೂರ್ತಿ ಶಿವಾಚಾರ್ಯ ಸಮ್ಮುಖ, ಪಿಎಸ್‍ಐ ಕೃಷ್ಣ ಸುಬೇದಾರ, ಶಿರಸ್ತೇದಾರ ಅವಿನಾಶ ಉಪಸ್ಥಿತಿ. ಫೆ.28 ರಂದು ಸಾಧಕರಿಗೆ ಶ್ರೀರಕ್ಷೆ ಕೊಡೇಕಲ್ ಶಿವಕುಮಾರ ಸ್ವಾಮಿ ಸಾನಿಧ್ಯ, ಪತ್ರಕರ್ತ ಅಶೋಕ ಸಾಲವಡಗಿ, ರಾಜ್ಯೋತ್ಸ ಪ್ರಶಸ್ತಿ ಪುರಸ್ಕøತ ತಿಪ್ಪಣ್ಣ ನಗನೂರ, ಕವಿ ಮಲ್ಲೇಶಿ ಕೋನ್ಹಾ ಳ, ಸಾಹಿತಿ ಎಂ.ಎಸ್. ಸಜ್ಜನ್, ಪತ್ರಕರ್ತ ಮಹಾಂತೇಶ ಹೊಗರಿ ಸನ್ಮಾನ, ಮಾ. 1 ರಂದು ಬೆಳಿಗ್ಗೆ 6 ಗಂಟೆಗೆ ಮಲ್ಲಿಕಾರ್ಜುನ ಮಹಸ್ವಾಮಿಗಳ ಕತೃ ಗದ್ದುಗೆಗೆ ರುದ್ರಾಭಿ ಷೇಕ, ಸಹಸ್ರ ಬಿಲ್ವಾರ್ಚನೆ ಬಸವರಾಜ ನಿಷ್ಠಿ ದೇಶಮುಖ ಉಪಸ್ಥಿತಿ, ನಂತರ 8 ಗಂಟೆಗೆ ವಡವಡಗಿ ವೀರಸಿದ್ದ ಮಹಾಸ್ವಾಮಿಯವರಿಂದ ಧ್ವಜಾರೋಹಣ ಅದೇ ದಿನ ಸಂಜೆ ಧರ್ಮ ಸಭೆ ಶರಣ ಚರಿತಾಮೃತ ಪ್ರವಚನ ಮಂಗಲ, ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಅಧ್ಯಕ್ಷತೆ, ಅರಸುಮನೆತನದ ಡಾ. ರಾಜಾ ಕೃಷ್ಣಪ್ಪ ನಾಯಕ ಉದ್ಘಾಟನೆ, ಶರಣಬಸಪ್ಪ ನಿಷ್ಠಿ, ಕೆವೈಡಿಸಿ ಬ್ಯಾಂಕ ಉಪಾಧ್ಯಕ್ಷ ಡಾ| ಸುರೇಶ ಸಜ್ಜನ್, ನಸಬೆ ಸದಸ್ಯ ವೇಣುಮಾಧವ ನಾಯಕ, ವೀರಸಿದ್ದ ಸ್ವಾಮಿ ಸಾನಿಧ್ಯ, ಪ್ರಬುಲಿಂಗ ಮಹಾಸ್ವಾಮಿ ನೇತೃತ್ವ, ಗಜೇಂದ್ರಗಡದ ಕಾಲಜ್ಞಾನಿ ಶರಣಬಸವೇಶ್ವರ ಸ್ವಾಮಿಯಿಂದ ಉಪದೇಶ, ವಿವಿಧ ಗಣ್ಯರು, ಮಠಾಧೀಶರು ಭಾಗವಹಿಸಲಿ ದ್ದಾರೆ ಎಂದು ಮಠದ ಪ್ರಭುಲಿಂಗ ಮಹಾಸ್ವಾಮಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here