ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಕಲೆ ಸಂಸ್ಕøತಿಯ ಅನಾವರಣ; ಅನಿರುದ್ಧ ಶ್ರವಣ ಪಿ.

0
14

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಕಲೆ ಸಾಂಸ್ಕøತಿ ಇತಿಹಾಸವನ್ನಾಗಿಸಲು ಕಾರ್ಯಕ್ರಮ ಸಂಭ್ರಮದಿಂದ ಆಯೋಜಿಸಲಾಗಿದ್ದು, ಉತ್ಸವ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಬೇಕೆಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ ಅವರು ಮಂಗಳವಾರ ಕೆ.ಕೆ.ಆರ್.ಡಿ.ಬಿ. ಕಚೇರಿ ಮುಂಭಾಗದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಕೆ.ಕೆ. ರನ್ (ಮ್ಯಾರಾಥನ್) ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ಫೆಬ್ರವರಿ 24, 25 ಹಾಗೂ 26 ರಂದು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವವನ್ನು ನಮ್ಮ ಕಲೆ ಸಾಂಸ್ಕøತಿ ಇತಿಹಾಸದಿಂದ ಕೂಡಿದೆ ಮುಂದಿನ ದಿನಮಾನಗಳ ಯುವಕರ ಪಾತ್ರ ಬಹಳ ಮುಖ್ಯವಾಗಿದ್ದು ನಮ್ಮ ಸಂಸ್ಕೃತಿ ಪರಂಪರೆ ಮುಂದಿನ ಪಿಳಿಗೆಗೆ ಉಳಿಸಿ. ಬೆಳೆಸುವ ಜವಾಬ್ದಾರಿ ಇದೆ ಎಂದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಕೆ.ಕೆ. ರನ್ (ಮ್ಯಾರಾಥಾನ್) ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಹಣ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಫೆಬ್ರವರಿ 22 ರಂದು ಬುಧವಾರದಂದು ಸೈಕ್ಲೋಥಾನ್, ಫೆಬ್ರವರಿ 23 ರಂದು ಗುರುವಾರ ವಾಕ್‍ಥಾನ ಸ್ಪರ್ಧೆಯನ್ನು ಬೆಳಿಗ್ಗೆ 6.30 ಗಂಟೆಗೆ ಕೆ.ಕೆ.ಆರ್.ಡಿ.ಬಿ. ಕಚೇರಿಯಿಂದ ಪ್ರಾರಂಭವಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.

ಕೆ.ಕೆ. ರನ್ (ಮ್ಯಾರಾಥಾನ್) ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ವಿವರ ಇಂತಿದೆ. 17 ವರ್ಷದೊಳಗಿನ ಬಾಲಕರ (5 ಕಿ.ಮೀ.) ಓಟದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಮಲ್ಲಪ್ಪ ತಂದೆ ಭೀಮಣ್ಣ (ಪ್ರಥಮ ಸ್ಥಾನ), ಮುತ್ತು ತಂದೆ ಶರಣಕುಮಾರ (ದ್ವಿತೀಯ ಸ್ಥಾನ) ಹಾಗೂ ಪ್ರೇಮ ತಂದೆ ದಿನೇಶ (ತೃತೀಯ ಸ್ಥಾನ) ಪಡೆದಿದ್ದಾರೆ.

17 ವರ್ಷ ಮೇಲ್ಪಟ್ಟ ಮಹಿಳೆಯರ ಮುಕ್ತ (5 ಕಿ.ಮೀ.) ಕೆ.ಕೆ. ರನ್ (ಮ್ಯಾರಾಥನ್) ಸ್ಪರ್ಧೆಯಲ್ಲಿ ಅಂಜಲಿ ತಂದೆ ಲಕ್ಷ್ಮಣ (ಪ್ರಥಮ ಸ್ಥಾನ), ಶ್ರೀಲೇಖ ತಂದೆ ಶಿವಾಜಿ (ದ್ವಿತೀಯ ಸ್ಥಾನ) ಹಾಗೂ ಅಸ್ಮಿತಾ ತಂದೆ ಸಂತೋಷÀ (ತೃತೀಯ ಸ್ಥಾನ) ಪಡೆದಿದ್ದಾರೆ.
17 ವರ್ಷದೊಳಗಿನ ಬಾಲಕಿಯರ (3 ಕಿ.ಮೀ.) ಕೆ.ಕೆ. ರನ್ (ಮ್ಯಾರಾಥಾನ್) ಓಟದ ಸ್ಪರ್ಧೆಯಲ್ಲಿ ಸಂಜನಾ ತಂದೆ ಬಸವರಾಜ (ಪ್ರಥಮ ಸ್ಥಾನ), ಸ್ಪಂದನಾ ತಂದೆ ಚನ್ನಕೇಶವ (ಎರಡನೇ ಸ್ಥಾನ) ಹಾಗೂ ಸಿದ್ದಿ ಜೈನ್ ತಂದೆ ನೀರಜ್ ಜೈನ್ (ತೃತೀಯ ಸ್ಥಾನ) ಪಡೆದಿದ್ದಾರೆ.

17 ವರ್ಷ ಮೇಲ್ಪಟ್ಟ ಪುರುಷ ಮುಕ್ತ (10 ಕಿ.ಮೀ.) ಕೆ.ಕೆ. ರನ್ (ಮ್ಯಾರಾಥಾನ್) ಓಟ ಸ್ಪರ್ಧೆಯಲ್ಲಿ ಭಜರಂಗಿ ತಂದೆ ಉತ್ತಮರಾವ್ (ಪ್ರಥಮ ಸ್ಥಾನ), ಪುಟ್ಟನಂಜ್ ತಂದೆ ಸಾಯಬಣ್ಣ (ದ್ವಿತೀಯ ಸ್ಥಾನ) ಹಾಗೂ ಶಿವಕುಮಾರ ತಂದೆ ಶೇಖಪ್ಪ (ತೃತೀಯ ಸ್ಥಾನ) ಪಡೆದಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಇμÁ ಪಂತ್, ಮಹಾನಗರ ಪಾಲಿಕೆ ಆಯುಕ್ತರಾದ ಪಾಟೀಲ್ ಭುವನೇಶ್ ದೇವದಾಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್. ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರರಾದ ಆರ್.ಪಿ. ಜಾಧವ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪ ಗೌಡ ಬಿರಾದಾರ, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಶಿವನಗೌಡ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ, ಹಣಮಂತ ಗೌಡ ಬಿರಾದಾರ ಸೇರಿದಂತೆ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here