ಕಲಬುರಗಿ: ಕನ್ನಡ ಭವನದಲ್ಲಿ ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯ ವತಿಯಿಂದ ಒಂದು ದಿನದ ಬ್ರಹತ್ ಸಾಲ ಮೇಳವನ್ನು ಆಯೋಜಿಸಲಾಗಿತ್ತು.
ಈ ಸಮ್ಮೇಳನದಲ್ಲಿ ಗೃಹ ಸಾಲ, ವಾಹನದ ಸಾಲ, ಶೈಕ್ಷಣಿಕ ಸಾಲ ಮತ್ತು ಇತರೆ ವೈಯಕ್ತಿಕ ಸಾಲಗಳ ಸೌಲಭ್ಯ ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಹಾಯಕ ಮಹಾ ಪ್ರಭಂದಕ ಸಂಜೀವಪ್ಪ ಆರ್.ಬಿ. ಅಧ್ಯಕ್ಷತೆ ವಹಿಸಿದ್ದರು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವಿಠಲ್ ಮಾಳಗಿ ವಿಭಾಗೀಯ ಪ್ರಭಂದಕರು, ವೀರಪ್ಪ ಪತರದ ವಿಭಾಗೀಯ ಪ್ರಭಂದಕರು ರಹಾ, ಪಿ.ತಿಮ್ಮಾರೆಡ್ಡಿ, ವರಿಷ್ಠ ಪ್ರಭಂದಕರು, ಶಶಿಕಾಂತ ದುಬಲಗುಂಡೆ, ಮಾರ್ಕೆಟಿಂಗ್ ಪ್ರಭಂದಕರು ಮತ್ತು ಕಲಬುರ್ಗಿಯ ಕೆನರಾ ಬ್ಯಾಂಕ ವಿವಿಧ ಶಾಖೆಗಳ ಪ್ರಭಂದಕರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಾಹನ ಡೀಲರ್ಸ, ಬಿಲ್ಡರ್ಸ್ ಮತ್ತು ಗ್ರಾಹಕರು ಭಾಗವಹಿಸಿದ್ದರು. ವಿವಿಧ ರೀತಿಯ ಸಾಲಗಳನ್ನು ವಿತರಣೆ ಮಾಡಿ, ಕೆನರಾ ಬ್ಯಾಂಕಿನ ಸಹಾಯ ಮಹಾ ಪ್ರಭಂದಕರು ಮಾತನಾಡಿ, ಕೆನರಾ ಬ್ಯಾಂಕ್ ಒಂದು ಉತ್ತಮ ಮತ್ತು ನಂಬಿಕೆಯ ಬ್ಯಾಂಕ್ ಆಗಿದ್ದು, ಬ್ಯಾಂಕಿನ ಸಾಲ ಸೌಲಭ್ಯಗಳ ಪ್ರಯೋಜನ ಪಡೆಯಲು ಕೋರಿದರು. ಶ್ರೀ. ವಿಜಯಕುಮಾರ ತೇಗಲತಿಪ್ಪಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಲ್ಬುರ್ಗಿ ಮಾತನಾಡಿ ಕೆನರಾ ಬ್ಯಾಂಕಿನ ಉತ್ತಮ ಹಾಗೂ ತ್ವರಿತ ಸೇವೆಯ ಕುರಿತು ಪ್ರಶಂಸಿದರು. ಬ್ಯಾಂಕಿನಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸಲು ಒತ್ತು ನೀಡಿದರು. ಅಶೋಕ್ ಟಿ.ಜಿ. ವರಿಷ್ಠ ಪ್ರಭಂದಕರು ರಹಾ, ಕಾರ್ಯಕ್ರಮದ ನಿರೂಪಣೆ ಮಾಡಿದರು.