ಸರ್ವರೊಳಗೊಂದು ನುಡಿ ಕಲೆತು ತ್ರಿಪದಿ ಚಿಸಿದ ಸರ್ವಜ್ಞ ಕವಿ

0
32

ಕಲಬುರಗಿ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬ ಸತ್ಯ ಅರಿತು, ಊರೂರು ಅಲೆದು, ಸರ್ವರೊಳಗೊಂದು ನುಡಿ ಕಲೆತು,ಕಂಡ ಸತ್ಯವನ್ನು ಕಂಡಂತೆ ಯಾರ ಹಂಗಿಲ್ಲದೆ ತಮ್ಮ ತ್ರಿಪದಿಗಳಲ್ಲಿ ವ್ಯಕ್ತ ಪಡಿಸಿದವರು ಸರ್ವಜ್ಞ ಕವಿ ಎಂದು ಬಸವರಾಜ ಮಾಸ್ಟರ ಗುಡೂರ ಹೇಳಿದರು.

ಅವರು ಶಹಾಬಾದ ನಗರದ ವೀರಶೈವ ಸಮಾಜದ ವತಿಯಿಂದ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತಿ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರದಲ್ಲಿ ಮಾತನಾಡಿದರು.

Contact Your\'s Advertisement; 9902492681

ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾμÉಗಳಿಗೆ ಭಾμÁಂತರಗೊಂಡಿದ್ದು, ಭಾμÉ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ. ಅನಾದಿ ಕಾಲದಿಂದಲೂ ನಮ್ಮ ದೇಶದ ನಾಡು ನುಡಿ, ಸಂಸ್ಕøತಿ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹಾತ್ಮರು ಅನೇಕರು. ಅವರೆಲ್ಲರೂ ಮುಂದಿನ ಪೀಳಿಗೆಗಾಗಿ ತಮ್ಮಲ್ಲಿ ಇರುವಂತಹ ಜ್ಞಾನವನ್ನು ನೀಡಿದ ಮಹಾ ಚೇತನಗಳು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಸಾಧಕರು ಉದಯಿಸಿ ತಮ್ಮ ಆದರ್ಶಗಳಿಂದ ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಉತ್ತುಂಗ ಶಿಖರದಲ್ಲಿ ನಿಲ್ಲಿಸಿದಂತಹ ವ್ಯಕ್ತಿಗಳಲ್ಲಿ ಅತಂತ್ಯ ಮುಖ್ಯವಾಗಿ ಕಂಡು ಬರುವಂತಹ ಸರ್ವರಿಗೂ ಜ್ಞಾನವನ್ನು ಹಂಚಿದಂತಹ ಮಹಾನ್ ಚೇತನ ನಮ್ಮ ಕವಿ ಸರ್ವಜ್ಞ ಎಂದರು.

ಅ.ಭಾ.ವೀರಶೈವ ಮಹಾಸಭಾದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಮಾತನಾಡಿ, ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಮೂರ್ತಿ ಬರೆಯದ ವಿಷಯವಿಲ್ಲ ಎಂಬ ಮಹಾನ್ ಹೇಳಿಕೆಯನ್ನು ಅವರ ತ್ರಿಪದಿಗಳಿಂದ ಗೊತ್ತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರಾದ ವಿಜಯಕುಮಾರ ಮುಟ್ಟತ್ತಿ, ಶಂಕರ ಕುಂಬಾರ, ಅಶೋಕ ಕುಂಬಾರ, ಚೆನ್ನಪ್ಪ ಕುಂಬಾರ, ರಾಜು ಕುಂಬಾರ, ಶಿವಪ್ಪ ಕುಂಬಾರ, ರಾಜಶೇಖರ ಬೆಳಗುಂಪಿ, ದತ್ತಾತ್ರೇಯ ಘಂಟೆ,ನಿಂಗಪ್ಪ ಹುಳಗೊಳಕರ, ನರಸಪ್ಪ ಕುಂಬಾರ, ಮನೋಹರ ಮಾಟ್ನಳ್ಳಿ, ಸಜ್ಜನ, ಮುದಿಗೌಡ, ರಾಜಶೇಖರ ಸ್ವಾಮಿ ಉಪಸ್ಥಿತಿತರಿದ್ದರು. ಸದಾನಂದ ಕುಂಬಾರ ನಿರೂಪಿಸಿ, ಸ್ವಾಗತಿಸಿದರು. ಭೀಮಾಶಂಕರ ಕುಂಬಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here