ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಸಾಂಸ್ಕತಿಕ ಇತಿಹಾಸ ಕಲೆ ಪರಂಪರೆಯ ಸಂಭ್ರಮದ ಕಾರ್ಯಕ್ರಮವಾಗಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ ಹೇಳಿದರು.
ಉತ್ಸವದ ನಿಮಿತ್ಯವಾಗಿ ಆಯೋಜಿಸಲಾದ ಸೈಕ್ಲೋಥಾನ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬುಧುವಾರದಂದು ಫೆಬ್ರವರಿ 24, 25 ಹಾಗೂ 26 ರಂದು ಮೂರು ದಿನಗಳ ಕಾಲ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ ಕಲ್ಯಾಣ ಕರ್ನಾಟಕ ಉತ್ಸವವನ್ನು ಅಭೂತಪೂರ್ವ ನಡೆಸಲು ಎಲ್ಲಾ ಸಕಲ ಸಿದ್ಧತೆ ಮಾಡಲಾಗಿದ್ದು, ಇಲ್ಲಿ ಅನೇಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಮಗೆ ನೀಡಿರುವ ಮಾರ್ಗದ ರಸ್ತೆಯಲ್ಲಿ ಸೈಕಲಿಂಗ್ ಮಾಡಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದೀರಿ ಸಂತೋಷ ತಂದಿದೆ ಎಂದರು.
ಜಾಥದಲ್ಲಿ ಭಾಗವಹಿಸಿ ಮೊದಲ ಹಾಗೂ ದ್ವಿತೀಯ ತೃತೀಯ ಸ್ಥಾನ ಪಡೆದವರಿಗೆ ಮಕ್ಕಳಿಗೆ ನಗದು ಹಾಗೂ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.
ಕಲ್ಯಾಣ ಕರ್ನಾಟಕ ಉತ್ಸವಕ್ಕೆ ನಾಳೆ ವಾಕ್‍ಥಾನ ಜಗತ್ ಸರ್ಕಲ್‍ದಿಂದ ಪ್ರಾರಂಭಗೊಳ್ಳಲಿದ್ದು, ಬೆಳಿಗ್ಗೆ 6.30 ಗಂಟೆಯಿಂದ ಪ್ರಾರಂಭವಾಗುವುದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಕೆ.ಕೆ.ಆರ್.ಡಿ.ಬಿ.ಕಚೇರಿಯಿಂದ ಆರಂಭಗೊಂಡು ನಾಗನಹಳ್ಳಿ-ಮರತೂರ-ನಾಗನಹಳ್ಳಿ ಮೂಲಕ ಕೆ.ಕೆ.ಆರ್.ಡಿ.ಬಿ.ಆಗಮಿಸಿ 25 ಕಿ.ಮೀ ಪುರುಷರ ಸ್ಪರ್ಧೆಯಲ್ಲಿ ಅಮರಯ್ಯ ತಂದೆ ನಿಂಗಯ್ಯ (ಪ್ರಥಮ ಸ್ಥಾನ), ಸಂತೋಷಕುಮಾರ ತಂದೆ ಕೆಂಚಪ್ಪನವರ (ದ್ವಿತೀಯ ಸ್ಥಾನ) ಹಾಗೂ ಶರತ್ ತಂದೆ ಗುರಪ್ಪ (ತೃತೀಯ ಸ್ಥಾನ) ಪಡೆದಿದ್ದಾರೆ.
10 ಕಿ.ಮೀ. ಮಹಿಳೆಯ ಸೈಕ್ಲೋಥಾನ್ ಸ್ಪರ್ಧೆಯಲ್ಲಿ ವರ್ಷಾ ತಂದೆ ಕಿಶನ್‍ಗೋಪಾಲ (ಪ್ರಥಮ ಸ್ಥಾನ), ಮಂಗಳಾರತಿ ತಂದೆ ನಾರಾಯಣದಾಸ (ದ್ವಿತೀಯ ಸ್ಥಾನ), ಪ್ರತಿ ಮಾನಕರ್ ತಂದೆ ತುಕ್ಕಪ್ಪ (ತೃತೀಯ ಸ್ಥಾನ) ಪಡೆದಿದ್ದಾರೆ.
5 ಕಿ.ಮೀ. ಬಾಲಕರ ಸ್ಪರ್ಧೆಯಲ್ಲಿ ವಿಲಾಸ ಚೌವ್ಹಾಣ ತಂದೆ ಗೋವಿಂದ (ಪ್ರಥಮ ಸ್ಥಾನ), ಭನೀತ ತಂದೆ ರವೀಂದ್ರ (ದ್ವಿತೀಯ ಸ್ಥಾನ) ಹಾಗೂ ಆಯಾನ್ ಇನಾಂದಾರ್ ತಂದೆ ಮೈನೋದ್ದಿನ್ (ತೃತೀಯ ಸ್ಥಾನ) ಪಡೆದಿದ್ದಾರೆ.
3 ಕಿ.ಮೀ. ಸ್ಪರ್ಧೆಯಲ್ಲಿ ದಿವ್ಯಾ ತಂದೆ ಪರಮೇಶ್ವರ (ಪ್ರಥಮ ಸ್ಥಾನ), ಚೈತ್ರಾ ತಂದೆ ಸಂತೋಷ (ದ್ವಿತೀಯ ಸ್ಥಾನ) ಹಾಗೂ ಭವ್ಯಶ್ರೀ ತಂದೆ ವೆಂಕಟಗಿರಿ (ತೃತೀಯ ಸ್ಥಾನ) ಪಡೆದಿದ್ದಾರೆ. ಉಳಿದ ಜನರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೆÇೀಲಿಸ್ ವರಿμÁ್ಠಧಿಕಾರಿ, ಇಶಪಂತ್, ಡಿ.ಸಿ.ಪಿ. ಅಡ್ಡೂರ್ ಶ್ರೀನಿವಾಸ, ಮಹಾನಗರ ಪಾಲಿಕ ಆಯುಕ್ತರಾದ ಪಾಟೀಲ್ ಭುವನೇಶ್ ದೇವದಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಇಲಾಖೆಯ ಉಪನಿರ್ದೇಶಕ ಸಕ್ರೆಪ್ಪ ಗೌಡ ಬಿರಾದಾರ, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರಾದ ಶಿವನಗೌಡ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.