ಸೇಡಂ; ವಿವಿಧ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ

0
201

ಸೇಡಂ; ಇಂದು ಬಾಲರಾಜ್ ಗುತ್ತೇದಾರ ಅವರ ನಿವಾಸದಲ್ಲಿ ಅಶೋಕ್ ಬಿ ಗುತ್ತೇದಾರ ಅವರ ಸಮ್ಮುಖದಲ್ಲಿ ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಡಿಕೇಶ್ವರ ಗ್ರಾಮದ ಯುವಕರು ಹಾಗೂ ಹಿರಿಯರು ವಿವಿಧ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅಶೋಕ ಗುತ್ತೇದಾರ್ ರವರು ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಜನಪರ ಯೋಜನೆಗಳು ಜೆಡಿಎಸ್ ಪಕ್ಷಕ್ಕೆ ದೊಡ್ಡ ಕೊಡುಗೆಯಾಗಿದೆ. ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ಎಲ್ಲಾ ಜನಾಂಗದ ಜನರ ಬದುಕು ಕಟ್ಟಿಕೊಳ್ಳಲು ಒಂದು ಉತ್ತಮವಾದಂತಹ ಯೋಜನೆಯಾಗಿದೆ.

Contact Your\'s Advertisement; 9902492681

ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೇತನ್ಯ, ವಸತಿ ಆಸರೆ, ಯುವ ನವ ಮಾರ್ಗ ಮತ್ತು ಮಹಿಳಾ ಸಬಲೀಕರಣ, ಆರೋಗ್ಯವೇ ಸಂಪತ್ತು ಈ ರೀತಿ ಸಾಮಾನ್ಯ ಜನರಿಗೆ ಅವಶ್ಯಕತೆ ಇರುವ ಯೋಜನೆಗಳು ಪಂಚರತ್ನ ದಾಗಿದೆ.

ಮುಂಬರುವ ದಿನಗಳಲ್ಲಿ ಇಲ್ಲಿನ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಕೊಡಬೇಕು. ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ತರಬೇಕು. ಸೇಡಂ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಾಲರಾಜ್ ಗುತ್ತೇದಾರ ಹಗಲಿರುಳೆಲ್ಲದೆ ಶ್ರಮಿಸುತ್ತಿದ್ದಾರೆ.

ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸ್ತ್ರಿ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ, ವೃದ್ಧರಿಗೆ ಮಾಸಿಕ ಮಾಶಾಸನ 5000 ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಹಲವಾರು ಜನಪರ ಯೋಜನೆಗಳನ್ನು ರೂಪಿಸಿದ್ದಾರೆ. ಆದಕಾರಣ ಪ್ರತಿಯೊಬ್ಬರು ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ‌ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮನವಿ‌ ಮಾಡಿದರು.

ಸೇರ್ಪಡೆಗೊಂಡವರು ಬಸವರಾಜ್, ಶರಣಬಸಪ್ಪ ಸಜ್ಜನ, ವೀರಪ್ಪ, ಮಂಜುನಾಥ್, ನಾಗೇಶ್, ಗುಂಡಪ್ಪ, ಸಿದ್ದು, ನಾಗೇಶ್, ಅವಿನಾಶ್, ಕೆದರ, ಶಿವರಾಜ್, ಧನರಾಜ್, ಸಾಬಣ್ಣ, ಚನ್ನಬಸಪ್ಪ, ಸಿದ್ದು, ವಿಶ್ವನಾಥ್ ಸೇರಿ ಅನೇಕರು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಅಂಕೀತಕುಮಾರ ಜೋಶಿ, ಬಶೀರ್ ಖಾನ್, ರಮೇಶ ನೀಲಂಗಿ, ಷಡಕ್ಷರಿ ಸ್ವಾಮಿ, ಮಸ್ತಾನ್ ಮಳಖೇಡ, ಸಂತೋಷ್ ಕೆರಳ್ಳಿ, ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here