ಅಶ್ವಾರೂಢ ಪ್ರತಿಮೆ ಅನಾವರಣ: ಸಂತಸ ವ್ಯಕ್ತ

0
27

ಶಹಾಬಾದ: ಕಾಯಕವೇ ಕೈಲಾಸ” ವೆಂದು ಸಾರುತ್ತಾ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನಡೆಸಿದವರು ಬಸವಣ್ಣನವರು. ಜಾತಿ, ಲಿಂಗ, ಭಾಷೆ ಭೇದಗಳ ತೊರೆದು ಸರ್ವರನ್ನೂ ಸಮನಾಗಿ ಕಂಡ ಮಾನವತಾವಾದಿ. ಹನ್ನರೆಡನೆಯ ಶತಮಾನದಲ್ಲಿ ರಾಜ ಬಿಜ್ಜಳನ ಪ್ರಧಾನಿಯಾಗಿದ್ದ ಬಸವಣ್ಣನವರು ಅನುಭಾವಿ, ಭಕ್ತಿ ಭಂಡಾರಿ, ಸಮಾಜ ಸುಧಾರಕ, ವಿಚಾರವಾದಿ, ಸಮಾಜವಾದಿ, ಅಹಿಂಸಾವಾದಿ, ದಲಿತೋದ್ಧಾರಕ ಮತ್ತು ಸ್ತ್ರೀ ಕುಲೋದ್ಧಾರಕರಾಗಿದ್ದಾರೆ ಎಂದರು.

ಬಸವಣ್ಣನವರು ಶ್ರಮ ಜೀವನದ ಘನತೆಯನ್ನು ಎತ್ತಿ ಹಿಡಿದು “ಕಾಯಕವೇ ಕೈಲಾಸ” ವೆಂದು ಸಾರಿದ ಮಹಾಚೇತನ. ಕನ್ನಡ ಸಾಹಿತ್ಯದಲ್ಲಿ ನೂತನ ಮಾರ್ಗವನ್ನು ನಿರ್ಮಿಸಿದವರು.

Contact Your\'s Advertisement; 9902492681

ಅಸ್ಪೃಶ್ಯತೆ, ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡಲು ತಮ್ಮ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ಮೇಲೆ ವರ್ಣ-ವರ್ಗರಹಿತ ಸಮಾಜವನ್ನು ರೂಪಿಸಲು ಮತ್ತು ಧರ್ಮ ಹಾಗೂ ಸಮಾಜದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಲು ಪ್ರಯತ್ನಿಸಿದವರು ಎಂದು ಸ್ಮರಿಸಿದರು.

ಅಂತಹ ಮಹಾನಚೇತನ ವಿಶ್ವಗುರು ಬಸವಣ್ಣವರ ಅಶ್ವಾರೂಢ ಪ್ರತಿಮೆಯ ಅನಾವರಣ ಶಹಾಬಾದ ನಗರದಲ್ಲಿ ಫೆ.೨೭ರಂದು ನಡೆಯುತ್ತಿರುವುದು ಎಲ್ಲಿಲ್ಲದ ಸಂತೋಷ ಉಂಟು ಮಾಡಿದೆ. ಇಲ್ಲಿನ ವೀರಶೈವ ಸಮಾಜದ ಬಹುದಿನಗಳ ಕನಸು ನನಸಾಗಿದೆ.ಈ ಪ್ರತಿಮೆ ಅವರ ತತ್ವಗಳನ್ನು ಎಲ್ಲಾ ಮನಸ್ಸುಗಳಿಗೆ ಮುಟ್ಟಲಿ.ಸಮಾನತೆಯ ಸಮಾಜ ಕನಸು ನನಸಾಗಲಿ ಎಂದು ಹಾರೈಸುತ್ತೆವೆ. – ಮೃತ್ಯುಂಜಯ್ ಹಿರೇಮಠ, ವಿಶ್ವರಾಧ್ಯ ಬೀರಾಳ, ಸಾಹೇಬಗೌಡ ಬೋಗುಂಡಿ ಮುಖಂಡರು ವೀರಶೈವ ಸಮಾಜ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here