ಡಯಾಲಿಸೀಸ್ ಕೇಂದ್ರ ಸ್ಥಾಪನೆ ಶೀಘ್ರ: ಗುತ್ತೇದಾರ

0
13

ಆಳಂದ: ‘ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸೀಸ್ ತಪಾಸಣೆ ಕೇಂದ್ರ ಶೀಘ್ರ ಸ್ಥಾಪನೆ ಮಾಡಲಾಗುತ್ತದೆ ‘ ಎಂದು ಶಾಸಕ ಸುಭಾಷ್ ಗುತ್ತೇದಾರ ಅವರು ಭರವಸೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಲ್ಯಾಪ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರೆವೇರಿಸಿ ಮಾತನಾಡಿ ಅವರು,ಮನವಿಗೆ ಸ್ಪಂದಿಸಿ, ‘ಆಸ್ಪತ್ರೆಯಲ್ಲಿ ಪಾರ್ಕಿಂಗ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದರು.

Contact Your\'s Advertisement; 9902492681

ಮುಖ್ಯ ಆಡಳಿತಾಧಿಕಾರಿ ಮಾಂತಪ್ಪ ಹಾಳಮಳ್ಳಿ ಮಾತನಾಡಿ,ಈ ಯೋಜನೆ ₹55 ಲಕ್ಷದ ಕಾಮಗಾರಿ ಇದೆ ಎಂದರು.

ಬಳಿಕ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ಮಾಡಿಕೊಂಡರು. ಪುರಸಭೆ ‍ಅಧ್ಯಕ್ಷೇ ರಾಜಶ್ರೀ ಖಜೂರಿ,ಕೆಲ ಪುರಸಭೆ ಸದಸ್ಯರು,ಮುಖಂಡರಾದ ವಿಠ್ಠಲರಾವ ಪಾಟೀಲ,ಸೇರಿದಂತೆ ಆಸ್ಪತ್ರೆಯ ವೈದ್ಯರು,ಸಿಬ್ಬಂದಿಗಳಾದ ಶ್ರೀಕಾಂತ್ ಭೂಸನೂರ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here