ರೈತರ ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ

0
8

ಕಲಬುರಗಿ: ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ನವ ಕರ್ನಾಟಕ ರೈತರ ಸಂಘ (ರಿ) ಕೇಂದ್ರ ಕಚೇರಿ ಕಲಬುರ್ಗಿ ಹಾಗೂ ಬೆಂಗಳೂರು ಇವರುಗಳ ಸಂಯೋಗದಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ ಕಿಸಾನ್ ಸಮನ್ವಯ ಸಮೂಹದ ಸಮಿತಿಯ ಸಭೆ ಜರುಗಿರು.

ಈ ದಿನದ ಸಭೆಯಲ್ಲಿ ಮಹಾರಾಷ್ಟ್ರದ ಅಶೋಕ್ ಜಿ ಅವರು ಮಾತನಾಡಿ ಗ್ರಾಮ ಸಭೆಯ ಬಗ್ಗೆ ಗ್ರಾಮ ಸ್ವರಾಜ್ಯದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ನಾವು ಹೇಗೆ ಪ್ರತಿದಿನ ಶೋ ಮಾರ್ಕೆಟ್ ಈ ದಿನ ಯಾವ ಸ್ಥಿತಿಯಲ್ಲಿ ಇದೆ ಎಂದು ತಿಳಿದು ಕೊಳ್ಳುತ್ತೇವೆಯೋ, ಹಾಗೆಯೇ ಗ್ರಾಮ ಪಂಚಾಯಿತಿಯಲ್ಲಿ ರೈತರು ಪ್ರತಿ ದಿನ ಯಾವ ಯಾವ ಬೆಳೆಗಳಿಗೆ ಎಲ್ಲೆಲ್ಲಿ ಏನೇನು ನಿಗದಿತ ಬೆಲೆ ಇದೆ ಎಂದು ರೈತರು ತಿಳಿದುಕೊಳ್ಳಬೇಕು. ಹಾಗೆಯೇ ಪ್ರತಿ ಒಂದು ಗ್ರಾಮ ಪಂಚಾಯಿತಿಯಲ್ಲಿ ಮಾರ್ಕೆಟ್ ಡಿಜಿಟಲ್ ವ್ಯವಸ್ಥೆ ಆಗಬೇಕೆಂದು ತಿಳಿಸಿದರು. ಹಾಗೆ ಗ್ರಾಮಸ್ವರಾಜ್ಯ ಜಾರಿಗೆ ಆಗಬೇಕಾದರೆ ಮೊದಲು ಎಲ್ಲಾ ಜನರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಚರಂಡಿಗಳ ವ್ಯವಸ್ಥೆ ಸುವ್ಯಸ್ತವಾಗಿ ಆಗಬೇಕು. ನಮ್ಮ ಗ್ರಾಮದಲ್ಲಿ ನೆಡೆಯುವ ಗ್ರಾಮ ಸಭೆಗೆ ಎಲ್ಲಾ ಜನರು ಭಾಗವಹಿಸಬೇಕು, ಆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಬರಬೇಕು. ಗ್ರಾಮದಲ್ಲಿ ರೈತ ಮಾರ್ಕೆಟ್ ಬಗ್ಗೆ ಡಿಜಿಟಲ್ ವ್ಯವಸ್ಥೆ ಆಗಬೇಕು.

Contact Your\'s Advertisement; 9902492681

ನೆರೆಗಾ ಯೋಜನೆ ಎಲ್ಲಿ ನಡೆಯುತ್ತದೆಯೊ ಅಲ್ಲಿ ಗ್ರಾಮದ ಅಭಿವೃದ್ಧಿ ಆಗುವುದೆಂದು ತಿಳಿಸಿದರು. ನಂತರ ತಮಿಳುನಾಡಿನಿಂದ ವಿಮಲ್ ಸುಂದರಂ ಅವರು ಮಾತನಾಡಿ ಗ್ರಾಮ ಸಭೆಗೆ ಎಲ್ಲಾ ಸದಸ್ಯರು ಸರಿಯಾಗಿ ಭಾಗವಹಿಸದೆ ಇದ್ದರೆ ಯಾವುದೇ ಕಾರ್ಯಕ್ರಮ ಸರಿಯಾದ ಫಲಾನುಭವಿಗಳಿಗೆ ಹೋಗುವುದಿಲ್ಲ ಆದ್ದರಿಂದ ಮೊದಲು ಆಯಾ ಗ್ರಾಮಗಳಲ್ಲಿ ಗ್ರಾಮ ಸಭೆಯಲ್ಲಿ ಎಲ್ಲರು ತಪ್ಪದೆ ಭಾಗವಹಿಸಬೇಕೆಂದು ತಿಳಿಸಿದರು.

ನಂತರ ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ದಯಾನಂದ ಪಾಟೀಲ್ ಅವರು ಮಾತನಾಡಿ “ನಮ್ಮ ಭಾರತ ದೇಶ ಅಭಿವೃದ್ಧಿ ಆಗಬೇಕಾದರೆ ಮೊದಲು ರೈತರ ಅಭಿವೃದ್ಧಿ ಆಗಬೇಕು” ಆಗ ಗ್ರಾಮ ಕೂಡ ಸ್ವರಾಜ್ಯ ಆಗುವುದೆಂದು ತಿಳಿಸಿದರು. ಈ ಸಭೆಯಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ರೈತ ಮುಖಂಡರುಗಳು ಭಾಗವಹಿಸಿದ್ದರು ಅವರಲ್ಲಿ ಪ್ರಮುಖರೆಂದರೆ ಅಮರನಾಥ ಬಾಯಿ ಗಾಂಧಿವಾದಿಗಳು, ದಶರಥ್ ಬಾಬು ರಾಷ್ಟ್ರೀಯ ಕಿಸಾನ್ ಸಮನ್ವಯ ಸಮಿತಿಯ ಅಧ್ಯಕ್ಷರು, ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ದಯಾನಂದ್ ಪಾಟೀಲ್, ಡಾ. ವಿಶ್ವಜಿತ್ ಒರಿಸ್ಸಾ, ವಿಜಯ ಬಾಬು ಛತ್ತಿಸ್ಗಡ್, ವಿರುಪಾನ್ ಶಾಸ್ತ್ರಿ ಮಧ್ಯ ಪ್ರದೇಶ್, ಅಶೋಕ್ ಶಬ್ಬಾನ್ ಮಹಾರಾಷ್ಟ್ರ, ಗೋಪಾಲ್ ಮೋದಾನಿ ಜೈಪುರ್, ಟಿ ಕೆ ಶರ್ಮಾ ಹರಿಯಾಣ, ವಿಕಲ್ ಪುಚಾರ್ ಹರಿಯಾಣ, ಸಿದ್ದರಾಮ ಪಾಟೀಲ್ ಕರ್ನಾಟಕ, ಸುರೇಂದ್ರ ವಿಮಲ್ ತಮಿಳುನಾಡು, ಶಿವಾಜಿ ಬಾಲೆಕಾರ್ ಮಹಾರಾಷ್ಟ್ರ, ದಲಿಜಿತ್ ಕೋರೆ ಪಂಜಾಬ್, ಬಂಧು ತಾಟಿ ಮಹಾರಾಷ್ಟ್ರ, ಪುಷ್ಪ ಯಾದವ್ ಕರ್ನಾಟಕ ಹಾಗೂ ಇನ್ನೂ ಅನೇಕ ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here