ಮೆಲ್ಬರ್ಗದ ಜನರಿಗೆ ಶೇ 10 ಮೀಸಲಾತಿ; ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿದೆ

0
11

ಕಲಬುರಗಿ: ಕೇಂದ್ರ ಮೆಲ್ಬರ್ಗದ ಜನರಿಗೆ ಶೇ 10 ಮೀಸಲಾತಿ ನೀಡುವ ಮೂಲಕ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತಂದಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಹೇಳಿದರು.

ನಗರದ ಅಂಜುಮನ್ ತರಖಿ-ಎ- ಉರ್ದು ಹಿಂದೆ ಸಭಾಂಗಣದಲ್ಲಿ ಗುರುವಾರ ಬಾಂಸೆಫ್ ಮತ್ತು ಯುನಿಟಿ ಆಫ್ ಮೂಲ ನಿವಾಸಿ ಹಾಗೂ ಮೂಲ ವಿವಾಸಿ ಬಹುಜನ ಮಹಿಳಾ ಸಂಘ ಸಂಯುಕ್ತಾಶ್ರಯದಲ್ಲಿ ರಮಾಬಾಯಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

“ಸಂವಿಧಾನದಲ್ಲಿ ಆರ್ಥಿಕ ಯೋಜನೆಗಳನ್ನು ನೀಡಲು ಅವಕಾಶವಿದೆ. ಆದರೆ, ಸರ್ಕಾರ ಮೇಲ್ವರ್ಗದವರಿಗೆ ಮೀಸಲಾತಿ ನೀಡಿ ಕೆಳವರ್ಗದವರಿಗೆ ಅನ್ಯಾಯ ಮಾಡಿದೆ’ ಎಂದು ಹೇಳಿದರು.

ಕೆಳ ಸಮುದಾಯ, ದಲಿತರು, ದುಡಿಯುವ ವರ್ಗ, ಹಿಂದುಳಿದವರಿಗೆ ಬೇಕಾದ ಸೌಲಭ್ಯ ಸಿಗುತ್ತಿಲ್ಲ. ದೇಶದ ಆಸ್ತಿಗಳೆಲ್ಲ ಖಾಸಗೀಕರಣ ಮಾಡುವ ಮೂಲಕ ಉದ್ಯೋಗ ಹಾಗೂ ಮೀಸಲಾತಿ ಹಕ್ಕ ಕಸಿದುಕೊಳ್ಳಲಾಗುತ್ತಿದೆ. ರಾಜ್ಯದ ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಾಗಿ ಮೇಲ್ವರ್ಗದವರನ್ನು ನೇಮಿಸಿ, ದಲಿತರು ಹಾಗೂ ಹಿಂದುಳಿದವರಿಗೆ ವಂಚನೆ ಆಗುತ್ತಿದೆ’ ಎಂದರು.

‘ದೇಶದಲ್ಲಿ ಅಸಮಾನತೆ, ರೈತರು ಮತ್ತು ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತಂದು, ಜನವಿರೋಧಿ ಮತ್ತು ಧಾರ್ಮಿಕ ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ದೇಶದ ಸಂಪತ್ತು ಹಾಗೂ ಭೂಮಿಯು ರಾಷ್ಟ್ರೀಕರಣವಾಗಬೇಕು ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಅದರಿಂದ ಸಾಮಾಜಿಕ ಸುಧಾರಣೆ ಬರಲು ಸಾಧ್ಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಾಂಸೆಫ್ ಅಂಡ್ ಯುನಿಟಿ ಅಫ್ ಮೂಲನಿವಾಸಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಕಮಲಾಕಾಂತ ಕಾಳೆ ಮಾತನಾಡಿ, ‘ದೇಶದಲ್ಲಿ ಅಸಮಾನತೆ ಹೆಚ್ಚುತ್ತಿದೆ. ಕೋಮುವಾದಕ್ಕೆ…. ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‍ನಲ್ಲಿ ಹಣಕಾಸು ಸಚಿವರು ಅಲ್ಪಸಂಖ್ಯಾತರ ಪದವನ್ನು ಬಳಸದೇ ಬಜೆಟ್ ಮಂಡನೆ ಮಾಡಿದ್ದಾರೆ’ ಎಂದರು.

ಆಳಂದದ ಬೆಳಮಗಿ ಧ್ಯಾನಭೂಮಿ ಬುದ್ಧವಿಹಾರದ ಭಂತೆ ಅಮರಜ್ಯೋತಿ, ಮೂಲ ನಿವಾಸಿ ಬಹುಜನ ಮಹಿಳಾ ಸಂಘದ ಜಮುನಾ ಟಿಳ್ಳೆ ಅವರು ಮಾತನಾಡಿದರು.

ಬಾಂಸೆಫ್ ಸಿಐಸಿ ಸುಭಾಷ ಶೀಲವಂತ ಅವರು ಪ್ರಾಸ್ತಾವಿಕ ಮಾತನಾಡಿದರು. ಲೋಕೋಪಯೋಗಿ ಇಲಾಖೆ ಆಡಳಿತ ನೌಕರರ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಮೀರ ಅಲಿ, ಸಾಮಾಜಿಕ ಕಾರ್ಯಕರ್ತ ಮಸ್ತಾನ ಬಿರಾದಾರ, ಫೆಡರೇಶನ್ ಬಹುಜನ ಸ್ಟುಡೆಂಟ್ ರಾಜ್ಯ ಮುಖಂಡ ಮಾರುತಿ ಗಂಜಗಿರಿ, ಯಲ್ಲಪ್ಪ ತಳವಾರ, ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here