ಕಲಬುರಗಿ: ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಪಕ್ಷದ ಅಭ್ಯರ್ಥಿಗಳಾದ ಇಮ್ಮಿಚೋಬಾ ಮತ್ತು ವೈಲಿಮಾ ಓನೇನ್‍ಚಾಂಗ್ ಜಯಶಾಲಿಗಳಾಗಿದ್ದಾರೆ.
ಒಟ್ಟು 7 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಅಭ್ಯಾರ್ಥಿಗಳ ಪೈಕಿ ಟ್ಯುನ್ ಸದರ 2 ಮತ್ತು ನೋಕ್‍ಸನ್ ಮತಕ್ಷೇತ್ರದ ಈ ಎರಡು ಸ್ಥಾನಗಳಲ್ಲಿ ಕಬ್ಬು (ಗನ್ನಾ ಕಿಸಾನ್), ಚಿಹ್ನೆಯಿಂದ ಗೆದ್ದಿರುವುದಕ್ಕಾಗಿ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸು ಮೂಡಿದೆ.
ನಗರದ (ಸಿರಗಾಪೂರ ಬಿಲ್ಡಿಂಗ್, ವೆಂಕಟೇಶ ಲಾಡ್ಜ್ ಎದುರುಗಡೆ ಸ್ಟೇಷನ್ ಬಜಾರ ರಸ್ತೆಯಲ್ಲಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಚೇರಿ ಎದುರುಗಡೆ ರಾಷ್ಟ್ರೀಯ ಕಾರ್ಯದರ್ಶಿ ಎ.ಬಿ. ಹೊಸಮನಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಪಾಂಡುರಂಗ ಕೊಟ್ರೆ, ಕಾರ್ಯಾಧ್ಯಕ್ಷ ರಘುರಾಮ ಕಡೇಕರ್, ಜಿಲ್ಲಾ ಉಪಾಧ್ಯಕ್ಷರಾದ ರೇವಣಸಿದ್ದಪ್ಪ ಹುಳಿಪಲ್ಲೆ, ಮಹಾದೇವ ಅಣವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಟೈಗರ್, ಜಿಲ್ಲಾ ಕಾರ್ಯದರ್ಶಿಗಳಾದ ರಾಜಕುಮಾರ ನಡಿಗೇರಿ, ಮಿಲಿಂದ್ ಕಣಮುಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನೀಲಕುಮಾರ ದೇವರ ಮನಿ, ಜಿಲ್ಲಾ ಖಜಾಂಚಿ ಅಮೃತ್ ಬಂಡೆ, ಕಲಬುರಗಿ ನಗರಾಧ್ಯಕ್ಷ ನಂದಕುಮಾರ ತಳಕೇರಿ, ಉತ್ತರ ಮತಕ್ಷೇತ್ರದ ಅಧ್ಯಕ್ಷ ಶೇಖ್ ಅಹ್ಮದ, ಜಿಲ್ಲಾ ಮುಖಂಡರಾದ ಶಂಕರ ಕೊರವಿ, ಚಂದ್ರಕಾಂತ ಪಾಟೀಲ ಇದ್ದರು.