ಕಲಬುರಗಿ; ಬಿಜೆಪಿಯ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್‍ಗಳ ಬೆಲೆಯೇರಿಕೆ ಮಾಡಿರುವುದನ್ನು ಖಂಡಿಸಿ ನಗರದ ಎಸ್.ವಿ.ಪಿ. ವೃತ್ತದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆ ಉದ್ದೇಶಿಸಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೇಡ್ ಎಸ್.ಎಮ್. ಶರ್ಮಾರವರು ಮಾತನಾಡುತ್ತಾ ಈಗಾಗಲೇ ದಿವಾಳಿಯಾಗಿರುವ ಜನರ ಮೇಲೆ ಗೃಹಬಳಕೆಯ ಅನಿಲ ಸಿಲಿಂಡರ್ ಮೇಲೆ ರೂ.50 ದರ ಹೆಚ್ಚಳದ ಹೇರಿಕೆಯನ್ನು ಕಟುವಾಗಿ ಖಂಡಿಸಿದರು. ಇದು ಕಳೆದ 12 ತಿಂಗಳಲ್ಲಿ 6ನೇ ಏರಿಕೆಯಾಗಿದೆ. ಈ ಬಜೆಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಅಡುಗೆ ಅನಿಲದ ಸಬ್ಸಿಡಿಯನ್ನು ಶೇ. 75ರಷ್ಟು ಕಡಿತ ಮಾಡಿರುವುದರಿಂದ ಈ ದರ ಏರಿಕೆಯಾಗಿದೆ. ಆದರೆ ಜಾಗತಿಕವಾಗಿ ಕಚ್ಚಾತೈಲದ ದರ ಇಳಿಕೆಯಾಗಿದೆ ಮತ್ತು ಭಾರತವು ರμÁ್ಯದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಆಮದು ಮಾಡುವ ಪ್ರಮಾಣವು ಹೆಚ್ಚಾಗಿದೆ. ಆದರೆ ಕೇಂದ್ರ ಸರ್ಕಾರವು ಮಾತ್ರ ಈ ಇಳಿಕೆಯ ಲಾಭವನ್ನು ಕೆಲವೇ ಕೆಲವು ಕಾರ್ಪೋರೇಟ್ ಮನೆತನಗಳು ನುಂಗಲು ನರೇಂದ್ರ ಮೋದಿ ಸರ್ಕಾರವು ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ವಿ.ಜಿ.ದೇಸಾಯಿರವರು ಮಾತನಾಡುತ್ತಾ ಕೇಂದ್ರ ಸರ್ಕಾರವು ಬಡವರಿಗೆ ‘ಉಜ್ವಲ’ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ನಮ್ಮ ಪ್ರಧಾನಿಗಳು ಕೊಚ್ಚಿಕೋಳ್ಳುತ್ತಾರೆ, ಆದರೆ ಈ ಉಜ್ವಲ ಫಲಾನುಭವಿಗಳು ಕೂಡ ಸಿಲಿಂಡರಿಗೆ ಇದೇ ಮಾರುಕಟ್ಟೆ ದರವನ್ನು ಕೊಟ್ಟು ಖರೀದಿಸಬೇಕು ಎಂಬುದನ್ನು ಜಾಣ್ಮೆಯಿಂದ ಮರೆಮಾಚುತ್ತಾರೆ. ನಿರಂತರ ಬೆಲೆಯೇರಿಕೆಯಿಂದಾಗಿ ಈಗ ಎಷ್ಟೋ ಜನರು ಸಿಲಿಂಡರ್‍ಗಳನ್ನು ಬಿಟ್ಟು ಮತ್ತೇ ಕಟ್ಟಿಗೆಯಲ್ಲಿ ಅಡುಗೆ ಮಾಡುವಂತಾಗಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಾಮ್ರೇಡ್ ಮಹೇಶ ಎಸ್.ಬಿ.ರವರು ಮಾತನಾಡುತ್ತಾ ವಾಣಿಜ್ಯ ಬಳಕೆಯ ಸಿಲಿಂಡರುಗಳ ಬೆಲೆಯನ್ನು ರೂ. 352ರಷ್ಟು ತೀವ್ರವಾಗಿ ಏರಿಕೆ ಮಾಡಿದ್ದು, ಪರಿಣಾಮವಾಗಿ ಹೋಟೆಲುಗಳು ಮತ್ತಿತರ ಉದ್ಯಮಗಳ ಮಾಲೀಕರು ಈ ಹೊರೆಯನ್ನು ನೇರವಾಗಿ ಸಾಮಾನ್ಯ ಗ್ರಾಹಕರಿಗೇ ವರ್ಗಾಯಿಸುತ್ತಾರೆ. ಇದರಿಂದ ಪರೋಕ್ಷ ತೆರಿಗೆಗಳು ಮೂಲಕ ಮತ್ತೆ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಬಿಸಿ ಎಲ್ಲ ವರ್ಗದ ಜನರನ್ನೂ ತಟ್ಟುತ್ತದೆ. ಆದರೆ ಅತಿ ಶ್ರೀಮಂತರು ಕಡಿಮೆ ಆದಾಯ ತೆರಿಗೆಯ ಸುಖವನ್ನು ಅನುಭವಿಸುತ್ತಾ, ತಮ್ಮ ಸಂಪತ್ತನ್ನು ಹಿಗ್ಗಿಸಿಕೊಳ್ಳುತ್ತಿದ್ದಾರೆಂದು ಹೇಳುತ್ತಾ, ಇದಕ್ಕೆಲ್ಲಾ ಬಿಜೆಪಿಯ ಕೇಂದ್ರ ಸರ್ಕಾರವೇ ನೇರ ಕಾರಣವೆಂದು ಹೇಳಿದರು.
ಕಾಮ್ರೇಡ್ ಗಣಪತ್‍ರಾವ್ ಕೆ. ಮಾನೆರವರು ಮಾತನಾಡುತ್ತಾ ಜನಸಾಮಾನ್ಯರು ಬಳಸುವ ಈ ಅಡುಗೆ ಅನಿಲದ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸುತ್ತಾ, ಇದರ ವಿರುದ್ಧ ಹೋರಾಡಲು ಮುಂದಾಗುವಂತೆ ಜನರಿಗೆ ಕರೆ ನೀಡಿದರು.
ಈ ಒಂದು ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಎಚ್.ವಿ.ದಿವಾಕರ್, ಜಿಲ್ಲಾ ನಾಯಕರಾದ ವಿ.ನಾಗಮ್ಮಾಳ್ ಮುಂತಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ರಾಮಣ್ಣ ಎಸ್. ಇಬ್ರಾಹಿಂಪುರ, ಜಗನ್ನಾಥ ಎಸ್.ಎಚ್., ಪಕ್ಷದ ಸದಸ್ಯರಾದ ರಾಘವೇಂದ್ರ ಎಮ್.ಜಿ, ಸಂತೋಷ ಹಿರವೆ, ಗೌರಮ್ಮ, ರಾಧಾ, ಸ್ನೇಹಾ ಕಟ್ಟಿಮನಿ, ತುಳಜಾರಾಮ, ಅರುಣ ಹಿರೇಬಾನರ್, ಭೀಮು ಆಂದೋಲಾ, ನಾಗರಾಜ, ಪ್ರೀತಿ ದೊಡ್ಡಮನಿ ಹಾಗೂ ನಗರದ ವಿವಿಧ ಬಡಾವಣೆಯ ನಾಗರೀಕರು, ಶಹಾಬಾದ ಮತ್ತು ವಾಡಿಯ ಜನತೆಯು ಭಾಗವಹಿಸಿದರು.