ಶಾಂತಿಯುತವಾಗಿ ಹೋಳಿ ಹಬ್ಬ ಆಚರಣೆ ಮಾಡಿ; ಪಿ.ಐ ಆನಂದ ವಾಘ್ಮೋಡೆ

0
17

ಸುರಪುರ: ಪ್ರತಿ ವರ್ಷದಂತೆ ತಾಲೂಕಿನ ಜನತೆ ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡುವಂತೆ ಪೊಲೀಸ್ ಇನ್ಸ್ಪೇಕ್ಟರ್ ಆನಂದ ವಾಘ್ಮೋಡೆ ಸಲಹೆ ನೀಡಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಷ್ಟವಿಲ್ಲದವರಿಗೆ ಬಲವಂತದಿಂದ ಬಣ್ಣ ಹಚ್ಚುವುದಾಗಲಿ,ಹಣಕ್ಕಾಗಿ ಬಲವಂತ ಮಾಡುವುದಾಗಲಿ ಯಾರೂ ಮಾಡಬೇಡಿ ಯಾವುದೇ ಕಾರಣಕ್ಕೂ ಅಹಿತಕರ ವಾತಾವರಣ ಸೃಷ್ಟಿಯಾಗದಂತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಶಾಂತಿ ಸೌಹಾರ್ಧತೆಯಿಂದ ಹೋಳಿ ಹಬ್ಬವನ್ನು ಆಚರಿಸುವಂತೆ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ನಮ್ಮದು ಸೌಹಾರ್ಧ ಸಾಮರಸ್ಯಕ್ಕೆ ಹೆಸರುವಾಸಿಯಾದ ತಾಲೂಕಾಗಿದೆ.ಇಲ್ಲಿ ಎಲ್ಲಾ ಧರ್ಮಿಯರು ಎಲ್ಲಾ ಹಬ್ಬವನ್ನು ತುಂಬಾ ಸಹೋದರತೆಯ ಭಾವನೆಯೊಂದಿಗೆ ಆಚರಣೆ ಮಾಡುತ್ತಾರೆ.ಹಿಂದುಗಳ ಹಬ್ಬವನ್ನು ಇತರೆ ಧರ್ಮಿಯರು ಭಾಗವಹಿಸಿ ಹಾಗೂ ಮುಸ್ಲೀಂ ಹಬ್ಬಗಳಾದ ರಮಜಾನ್,ಮೋಹರಂ ಹಾಗೂ ಕ್ರೈಸ್ತರ ಕ್ರಿಸ್ ಮಸ್‍ನಂತಹ ಹಬ್ಬಗಳನ್ನು ಎಲ್ಲರು ಸೇರಿ ಆಚರಿಸಿ ಸಹೋದರತೆಯನ್ನು ಮೆರೆಯುತ್ತಾರೆ.ಆದ್ದರಿಂದ ಅದರಂತೆಯೇ ಈಗ ಎಲ್ಲರು ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ ಮತ್ತು ಕೆಮಿಕಲ್ ಬಣ್ಣವನ್ನು ತ್ಯಜಿಸಿ ಆರೋಗ್ಯಕ್ಕೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರದಂತ ಬಣ್ಣವನ್ನು ಹಚ್ಚಿ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಎಲ್ಲರು ಸೇರಿ ಹಬ್ಬವನ್ನು ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ಪಿಎಸ್‍ಐ ಸಿದ್ರಾಮಪ್ಪ,ಮುಖಂಡರಾದ ವೆಂಕೋಬ ದೊರೆ ಬೊಮ್ಮನಹಳ್ಳಿ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ಸಚಿನಕುಮಾರ ನಾಯಕ,ಮುಫ್ತಿ ಎಕ್ಬಾಲ್ ಸಾಬ್ ಒಂಟಿ, ಭೀಮರಾಯ ಸಿಂದಗೇರಿ,ಖಾಜಾ ಅಜ್ಮೀರ್ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here