ಕಲಬುರಗಿ: ನಗರದ ಮದರ್ ತೆರಿಸಾ ಸಭಾಂಗಣ ಸೈಂಟ್ ಮೇರಿ ಚರ್ಚ್‍ನಲ್ಲಿ ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟ, ಕಲಬುರಗಿ ಹಾಗೂ ಕಲಬುರಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಸ್ತುತ ಮಹಿಳೆ ಮುಂದಿರುವ ಸವಾಲುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೋಳಲಾಯಿತು.
ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಗೋದುತಾಯಿ ಮಹಿಳಾ ಮಹಾವಿದ್ಯಾಲಯ ನಿವೃತ ಪ್ರಾಂಶುಪಾಲರಾದ ಡಾ. ನೀಲಾಂಬಿಕಾ ಪೆÇಲೀಸ್ ಪಾಟೀಲ್ ಅವರ ಮಾತನಾಡಿ ಲಿಂಗ ಅಸಮಾನತೆ ನಿವಾರಣೆಗಾಗಿ 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹೋರಾಟ ಮಾಡಿದರು ಆದರೆ ಪುರುಷರಿಗೆ ಸರಿ ಸಮಾನವಾದ ಹಕ್ಕುಗಳನ್ನು ದೇಶದ ಎಲ್ಲ ಜನ ಸಮುದಾಯದ ಮಹಿಳೆಯರಿಗೂ ಇಂದು ಅಧಿಕಾರ ಅವಕಾಶಗಳನ್ನು ಶಾಸನಾತ್ಮಕವಾಗಿ ನೀಡಿತು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು. ಇಂದು ಅಂತರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮವನ್ನು ಪುರುಷರೆ ಮುಂದೆ ನಿಂತು ಶ್ರಮಿಸಿ ಆಯೋಜನೆ ಮಾಡಿರುವುದು ಸಂತಸದ ಸಂಗತಿ ಇಂದು ಈ ಕಾರ್ಯಕ್ರಮದ ಮೂಲಕ ಮಹಿಳೆಯರಾದ ನಾವು ನಮ್ಮ ಕಳೆದುಹೋದ ಚರಿತ್ರೆಯನ್ನು ಹುಡುಕಬೇಕಾಗಿದೆ.
ಈ ದೇಶದ ಮಹಿಳಾ ಚರಿತ್ರೆಗೆ ತನ್ನದೇ ಆದ ಇತಿಹಾಸವಿದೆ. ಸಮಸ್ಯೆ ಮನುಷ್ಯನನ್ನು ಸಮಸ್ಯೆ ಮನುಷ್ಯನನ್ನು ಹೇಡಿಯನ್ನಾಗಿ ಮಾಡುತ್ತದೆ ಆದರೆ ಸವಾಲುಗಳು ಮಹಿಳೆಯರನ್ನು ಒಳಗೊಂಡಂತೆ ಎದ್ದು ನಿಲ್ಲುವಂತೆ ಮಾಡುತ್ತದೆ. ಹಾಗಾಗಿ ನಾವು ಬಡವರಾಗಿ ಹುಟ್ಟಿರುವುದು ತಪ್ಪಲ್ಲ ಬಡತನದಲ್ಲಿ ಸಾಯುವುದು ತಪ್ಪು. ಗಂಡ ಸತ್ತ ವಿದಿವೆರಿಗೂ ಸಮಾಜದ ಸಾಮಾನ್ಯ ಹೆಣ್ಣು ಮಕ್ಕಳಿಗೂ ಕೂಡ ಅಕ್ಷದ ಅಕ್ಷರದ ಅರಿವು ಮೂಡಿಸುವ ಮೂಲಕ ಅವರ ಬಾಡಿಗೆ ಹೊಸ ಬೆಳಕನ್ನು ಕೊಟ್ಟ ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಅವಿಸ್ಮರಣೆ ಯಾಗಿದೆ ಎಂದು ತಮ್ಮ ವಿಚಾರಗಳನ್ನು ಮಂಡಿಸಿದರು.
ಕಾರ್ಯಕ್ರಮವನ್ನು ಕೆ.ಬಿ.ಎನ್. ಇಂಜಿನೀಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಪೆÇ್ರ. ಕಾವೇರಿ ಎಸ್. ನಾಯಕ ಅವರು ಉದ್ಘಾಟಿಸಿ ಮಾತನಾಡುತ್ತಾ ಮನೆಯ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ಇಂದು ನಾವೆಲ್ಲ ಮಹಿಳೆಯರು ನಮ್ಮ ನಮ್ಮ ಮುಂದಿನ ಪೀಳಿಗೆಗೆ, ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವ ಬಹುದೊಡ್ಡ ಜವಾಬ್ದಾರಿ ನನ್ನಂತ ಎಲ್ಲಾ ಮಹಿಳೆಯರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಮ್ಮ ಕಡ್ಲಾ ವಹಿಸಿದರು, ಮುಖ್ಯ ಅತಿಥಿಗಳಾಗಿ ಪಾದರ್ ಸಂತೋಷ್ ಡಾಯಸ್, ಮೀನಾ ಕುಮಾರಿ ಬೊರಾಳಕರ್, ನರಸಮ್ಮ ಹಣಮಂತ ಕಲಾವತಿ ಪ್ರಭು ಯಳಸಂಗಿ, ಭಾಗಮ್ಮ ಬನಸೋಡೆ, ಕವಿತಾ ಇನಾಮ್ದಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಲ್ಲಮ ಪ್ರಭು ನಿಂಬರ್ಗಾ, ಡಾ ಅನಿಲ್ ಟೆಂಗಳಿ, ರಾಘವೇಂದ್ರ ಪರತಾಬಾದ್, ಕರಣಕುಮಾರ್ ಬಂದ್ರವಾಡ, ಶಿವಕುಮಾರ್ ಚಿಂಚೋಳಿ, ಬ್ರಹ್ಮಾನಂದ ಮಿಂಚ, ಅನಿಲ್ ಚಕ್ರ ಸರ್, ಸರಸ್ವತಿ ಜಾನನೆ ಕಾರ್ಯಕ್ರಮವನ್ನು ನಿರೂಪಿಸಿದರು, ಗಾಯತ್ರಿ ಅವರು ಸ್ವಾಗತಿಸಿದರು,ರೇಖಾ ಇಂದ್ರ ನಗರ ವಂದಿಸಿದರು.