ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಡಾ.ಚಂದ್ರಶೇಖರ್

0
74

ಕಲಬುರಗಿ: ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕು. ಚೆನ್ನಾಗಿ ಬರೆಯುವೆ ಎಂಬ ಆತ್ಮ ವಿಶ್ವಾಸದೊಂದಿಗೆ ಪರೀಕ್ಷೆಯನ್ನು ಎದುರಿಸಬೇಕು. ಯಾವುದೇ ಪರೀಕ್ಷೆಯನ್ನು ಆತಂಕ ಪಡದೆ ಸಂಭ್ರಮಿಸಿಬೇಕು. ಅಂದಾಗ ಮಾತ್ರ ಉತ್ತಮ ಫಲಿತಾಂಶ ಖಂಡಿತ ಸಿಗುತ್ತದೆ ಎಂದು ಖ್ಯಾತ ಮನೋವೈದ್ಯ ಡಾ.ಸಿ.ಆರ್ ಚಂದ್ರಶೇಖರ್ ಹೇಳಿದರು.

ನಗರದ ಶರಣಬಸವ ವಿವಿಯಿಂದ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಇಂಡಕ್ಷನ್ (ದೀಕ್ಷಾರಂಭ- ೨೦೧೯) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೋರೋಗದ ಲಕ್ಷಣದ ಕುರಿತು, ವಿಶೇಷ ಉಪನ್ಯಾಸ ನೀಡಿದರು. ಯಾವುದೇ ವಿಷಯ ಕಷ್ಟಪಟ್ಟು ಕಂಠಪಾಠ ಮಾಡಿ ಅಧ್ಯಯನ ಮಾಡಬಾರದು. ತರ್ಕ ಬದ್ಧವಾಗಿ, ಇಷ್ಟಪಟ್ಟು ಖುಷಿಯಿಂದ ಓದುವದರಿಂದ ನಿಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದರು.

Contact Your\'s Advertisement; 9902492681

ನಿಮ್ಮ ಮನಸ್ಸಿನ ಮೇಲೆ ಒತ್ತಡ ಬಂದಾಗ ಮೊಬೈಲ್, ಮದ್ಯಪಾನ, ಮಾದಕ ವಸ್ತುಗಳು ಸೇರಿದಂತೆ ವಿವಿಧ ಹಾನಿಕಾರಕ ದುಶ್ಚಟಗಳಿಗೆ ದಾಸರಾಗಬೇಡಿ. ಇದರಿಂದ ನಿಮ್ಮ ಭವಿಷ್ಯ ಕತ್ತಲಾಗುತ್ತದೆ. ಸಂಗೀತ, ಧ್ಯಾನ, ಪ್ರಕೃತಿ ಸೌಂದರ್ಯದ ಕಡೆ ಆಸಕ್ತಿ ಬೆಳೆಸಿಕೊಂಡು, ಆತ್ಮ ಗೌರವದಿಂದ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳಾದ ನೀವು ಪ್ರತಿಯೊಬ್ಬರಲ್ಲಿ ತಪ್ಪು ಹುಡುಕಬೇಡಿ. ಬದಲಾಗಿ ಅವರಲ್ಲಿಯ ಒಳ್ಳೆಯದನ್ನು ಗಮನಿಸಿ. ನಕಾರಾತ್ಮಕ ಧೋರಣೆಗಳಿಗೆ ಆಕರ್ಷಣೆಯಾಗದೇ, ಸಾಮಾಜಿಕ ಮಾನವೀಯ ಮೌಲ್ಯಗಳನ್ನು ಬೆಳಿಸಿಕೊಳ್ಳುವದು ಉತ್ತಮ ಮಕ್ಕಳ ಲಕ್ಷಣ ಎಂದು ತಿಳಿಸಿದರು.

ಶರಣಬಸವೇಶ್ವರ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಶಂಕರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಉತ್ಸಾಹದಿಂದ ಉತ್ತಮ ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ನಿಮ್ಮ ಗುರಿ ಸಾಧಿಸಲು ಸಾಧ್ಯ ಎಂದರು.
ಹುಬ್ಬಳಿಯ ಕೆ.ಎಲ್.ಇ ಟೆಕ್ನೊಲೊಜಿಕಲ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಅರವಿಂದ ಕುಲಕರ್ಣಿ ಮಾತನಾಡಿ, ನಾವು ಈ ಸಮಾಜದಲ್ಲಿ ಜನಿಸಿರುವುದೇ ಜಯಶಾಲಿಯಾಗಲು ಎಂಬ ಭಾವನೆಯಿಂದ ಯಾವುದೇ ಕೆಲಸ ಪ್ರಾರಂಭಿಸಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ನಾವು ಯಾವುದೇ ಕೆಲಸದ ಬಗ್ಗೆಯಾಗಲಿ ಹೇಗೆ ? ಏನು ? ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ನಿನ್ನೆ ನಾವು ಮಾಡಿದ ಕೆಲಸಗಳನ್ನು, ಇವತ್ತು ಮಾಡಬೇಕಾದ ಕಾರ್ಯಗಳನ್ನು ಮತ್ತು ನಾಳೆ ಮಾಡಬೇಕಾದ ಬಗ್ಗೆ ಪ್ರತಿದಿನ ಬರೆದಿಟ್ಟುಕೊಳ್ಳಬೇಕು. ಎಲ್ಲಿ ಆತ್ಮಸ್ಥೈರ್ಯ ಬಲವಾಗಿರುತ್ತದೆಯೋ ಅಲ್ಲಿ ಯಶಸ್ಸು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿವಿ ಸಮ ಕುಲಪತಿ ಡಾ.ವಿ.ಡಿ ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮಿ ಮಾಕಾ, ಪ್ರಾಚಾರ್ಯ ಶಂಕರಗೌಡ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here