ಕಲಬುರಗಿ; ಕೇಂದ್ರ ಸರ್ಕಾರದ ಪ್ರಾಯೋಜಿತ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಆಧಾರಿತ ವಿವಿಧ ಯೋಜನೆಗಳಡಿ ಆಯ್ಕೆಯಾದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ 2023ರ ಮಾರ್ಚ 15 ರಂದು ಬೆಳಿಗ್ಗೆ 11 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಆವರಣದ (ಪರೀಕ್ಷ ವಿಭಾಗದ ಬಲಭಾಗ ) ನಡೆಯುವ ಕಾರ್ಯಕ್ರಮಕ್ಕೆ ವಿವಿಧ ಇಲಾಖೆಗಳ ಫಲಾನುಭವಿಗಳ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ 10 ಸಾವಿರ ಫಲಾನುಭವಿಗಳು, ಕಾರ್ಮಿಕ ಇಲಾಖೆ 10 ಸಾವಿರ ಫಲಾನುಭವಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 10 ಸಾವಿರ ಫಲಾನುಭವಿಗಳು, ಕೃಷಿ ಇಲಾಖೆ 5 ಸಾವಿರ ಫಲಾನುಭವಿಗಳು, ನರೇಗಾ ಇಲಾಖೆ 5 ಸಾವಿರ ಫಲಾನುಭವಿಗಳು, ಸಹಕಾರ ಇಲಾಖೆ 5 ಸಾವಿರ ಫಲಾನುಭವಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ದೇವರಾಜ ಅರಸ 3 ಸಾವಿರ ಫಲಾನುಭವಿಗಳು, ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ ಅಭಿವೃದ್ಧಿ ನಿಗಮ ಪ.ಪಂ.ಅಭಿವೃದ್ಧು ನಿಗಮ 3250 ಫಲಾನುಭವಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2 ಸಾವಿರ ಫಲಾನುಭವಿಗಳು, ತೋಟಗಾರಿಕೆ ಇಲಾಖೆ 2 ಸಾವಿರ ಫಲಾನುಭವಿಗಳು, ವಸತಿ ಯೋಜನೆ ಇಲಾಖೆ 2 ಸಾವಿರ ಫಲಾನುಭವಿಗಳು, ಕಂದಾಯ ಇಲಾಖೆ 2 ಸಾವಿರ ಫಲಾನುಭವಿಗಳು, ಪಶುವೈದ್ಯ ಮತ್ತು ಪಶು ಪಾಲನೆ ಇಲಾಖೆ 861 ಫಲಾನುಭವಿಗಳು, ಎಸ್.ಬಿ.ಎಂ ಇಲಾಖೆ 500 ಫಲಾನುಭವಿಗಳು, ಮೀನುಗಾರಿಕೆ ಇಲಾಖೆ 100 ಫಲಾನುಭವಿಗಳು ಸೇರಿದಂತೆ ಒಟ್ಟು 60,711 ಫಲಾನುಭವಿಗಳು ಭಾಗವಹಿಸಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.