ಕಲಬುರಗಿ; ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ವಿವಿಧ ಪ್ರತಿಷ್ಠಿತ 15 ಕಂಪನಿಗಳ ಸಹಯೋಗದೊಂದಿಗೆ ಸಂಜೀವಿನಿ – ಕೆಎಸ್‍ಆರ್‍ಎಲ್‍ಪಿಎಸ್‍ನ ಡಿಡಿಯುಜಿಕೆವೈ ಯೋಜನೆಯಡಿ “ಆಜಾದಿ ಕಾ ಅಮೃತ ಮಹೋತ್ಸವದ ಕ್ಯಾಂಪೇನ್” ಅಂಗವಾಗಿ ನಗರದ ಸರ್ದಾರ ವಲ್ಲಭಾಯಿ ವೃತ್ತದ (ತಿಮ್ಮಾಪೂರಿ ವೃತ್ತ) ಬಳಿಯರುವ ಕನ್ನಡ ಭವನದಲ್ಲಿ ಇದೇ ಮಾರ್ಚ್ 21 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಸದರಿ ಉದ್ಯೋಗ ಮೇಳದಲ್ಲಿ ವಿವಿಧ ರಾಜ್ಯಗಳ ಪ್ರತಿಷ್ಠ ಸುಮಾರು 15-20 ತಾಂತ್ರಿಕ ಹಾಗೂ ತಾಂತ್ರಿಕೇತರ ಸೇವೆಗಳು, ಆಟೋಮೊಬೈಲ್ಸ್ ಪೈನಾನ್ಸ್, ರಿಟೇಲ್ ಇತರೆ ಸೇವೆಗಳಲ್ಲಿ ಅಭ್ಯರ್ಥಿಗಳಿಗೆ ಹಲವಾರು ಉದ್ಯೋಗ ಅವಕಾಶ ಇರುತ್ತದೆ. ಈ ಉದ್ಯೋಗ ಮೇಳದಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಎಸ್‍ಎಸ್‍ಎಲ್‍ಸಿ, ಐಟಿಐ, ಪಿಯುಸಿ ಹಾಗೂ ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಅರ್ಹ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಮೇಲ್ಕಂಡ ದಿನದಂದು ನಡೆಯುವ ಉದ್ಯೋಗ ಮೇಳದಲ್ಲಿ ತಮ್ಮ ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ, ಆಧಾರ ಕಾರ್ಡ್ ಹಾಗೂ ವೈಯಕ್ತಿಕ ಬಯೋಡಾಟಾದೊಂದಿಗೆ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-278615, ಮೊಬೈಲ್ ಸಂಖ್ಯೆ 9480866002, 9902566736, 9845825477, 7795169992ಗಳಿಗೆ ಸಂಪರ್ಕಿಸಲು ಕೋರಿದೆ.