ಕುಡಿಯುವ ನೀರಿನ ಕಾಮಗಾರಿ ಉದ್ಘಾಟನೆಗೊಳಿಸಿದ ಸಚಿವ ಬೈರತಿ ಬಸವರಾಜ

0
8

ಸುರಪುರ: ನಗರಕ್ಕೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವ ನೀರು ಸರಬರಾಜು ಕಾಮಗಾರಿಯನ್ನು ನಗರಾಭಿವೃಧ್ಧಿ ಸಚಿವ ಬೈರತಿ ಬಸವರಾಜ ಉದ್ಘಾಟಿಸಿದರು.

ತಾಲೂಕಿನ ಕಂಪಾಪುರ ಬಳಿಯಲ್ಲಿ ನಿರ್ಮಿಸಿರುವ ಜಾಕವೆಲ್ ಹಾಗೂ ನಗರದ ಕುಂಬಾರಪೇಟೆ ಬಳಿಯಲ್ಲಿ ನಿರ್ಮಿಸಿರುವ ಜಲಶುದ್ಧೀಕರಣ ಘಟಕದ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 196 ಕೋಟಿ ರೂಪಾಯಿಗಳ ಅನುದಾನದಲ್ಲಿ ನಿರ್ಮಿಸಲಾಗಿರುವ ಕಾಮಗಾರಿಯನ್ನು ಉದ್ಘಾಟಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಚಿವ ಬೈರತಿ ಬಸವರಾಜ ಮಾತನಾಡಿ,ಇಂದು ಐತಿಹಾಸಿಕವಾದ ದಿನವಾಗಿದೆ,ನಗರದ ಜನರ ಅನೇಕ ವರ್ಷಗಳ ಕುಡಿಯುವ ನೀರಿನ ತೊಂದರೆಯನ್ನು ದೂರಮಾಡಲು ಶಾಸಕ ರಾಜುಗೌಡ ಅವರು ತುಂಬಾ ಶ್ರಮವಹಿಸಿ ಯೋಜನೆಯನ್ನು ತಂದಿದ್ದು,ಕೇವಲ 12 ತಿಂಗಳಲ್ಲಿ ಕಾಮಗಾರಿ ಉದ್ಘಾಟನೆ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

ಶಾಸಕ ರಾಜುಗೌಡ ಮಾತನಾಡಿ,ನಗರದ ಜನರು ತಿಂಗಳಿಗೆ ಒಂದು ಎರಡು ಬಾರಿ ಮಾತ್ರ ನೀರು ಪಡೆಯುತ್ತಿದ್ದರು,ಆದರೆ ಈ ಮುಂದೆ ದಿನದ 24 ಗಂಟೆಯೂ ಶುದ್ಧ ನೀರನ್ನು ಪಡೆಯಬಹುದಾಗಿದೆ.ಅಲ್ಲದೆ ನಮ್ಮ ವಿರೋಧಿಗಳು ಈ ಯೋಜನೆ ಮುಂದೆ ನಿಲ್ಲುತ್ತದೆ ಎಂದು ಅಪಪ್ರಚಾರ ಮಾಡುತ್ತಾರೆ ಜನರು ಇದಕ್ಕೆ ಕಿವಿಗೊಡಬೇಡಿ,ರಾಜುಗೌಡ ಇಲ್ಲವಾದಮೇಲೂ ಈ ಯೋಜನೆ ಜನರಿಗಾಗಿ ಇರುತ್ತದೆ ಎಂದರು.ಅಲ್ಲದೆ ಈಗ ನಗರದ ಜನರು ನೀರು ಬಂದರು ಬರದಿದ್ದರು ತಿಂಗಳಿಗೆ 120 ರೂಪಾಯಿ ನೀರಿನ ದರ ನೀಡುತ್ತಿದ್ದಾರೆ.ಆದರೆ ಈ ಯೋಜನೆಯಿಂದ ಕೇವಲ 56 ರೂಪಾಯಿಗಳಲ್ಲಿ ತಿಂಗಳಿಗೆ 8 ಸಾವಿರ ಲೀಟರ್ ನೀರು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ,ನಗರಸಭೆ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ಉಪಾಧ್ಯಕ್ಷ ಮಹೇಶ ಪಾಟೀಲ್ ಸೇರಿದಂತೆ ಅನೇಕರಿದ್ದರು.

ಬಾಕ್ಸ್ ಮಾಡಿ ಹಾಕಿಕೊಳ್ಳಿ: ಸಚಿವ ವಿ.ಸೋಮಣ್ಣ ಪಕ್ಷ ಬಿಡುತ್ತಾರೆ ಎನ್ನಲಾಗುತ್ತಿದೆ ಎಂದ ವರದಿಗಾರರ ಪ್ರಶ್ನೆಗೆ ವಿವರಣೆ ನೀಡಿದ ಸಚಿವರು,ಸಚಿವ ವಿ.ಸೋಮಣ್ಣ ಪಕ್ಷ ಬಿಡುತ್ತಾರೆ ಎನ್ನುವುದು ಸುಳ್ಳು ಯಾರುಕೂಡ ಪಕ್ಷ ಬಿಡುವುದಿಲ್ಲ.ಅಲ್ಲದೆ ಸಿದ್ದರಾಮಯ್ಯನವರಿಗೆ ಕೋಲಾರ ಸೇಫ್ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿ,ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಅದರ ಬಗ್ಗೆ ಮಾತನಾಡಲ್ಲ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here