ಸುರಪುರ: ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏಪ್ರಿಲ್ 10ರ ವರೆಗೆ ನೀರು ಹರಿಸುವಂತೆ ಕ್ರಮ ಕೈಗೊಳ್ಳುವಂತೆ ಶಾಸಕ ರಾಜುಗೌಡ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಶಾಸಕರು,ಈಗ ಮಾರ್ಚ್ 30ರ ವರೆಗೆ ನೀರು ಹರಿಸುವುದಾಗಿ ತಿಳಿಸಿದ್ದೀರಿ,ಆದರೆ ರೈತರ ಸೂರ್ಯಕಾಂತಿ,ಶೇಂಗಾ,ಸಜ್ಜೆ ಸೇರಿ ವಿವಿಧ ಬೆಳೆಗಳಿಗೆ ನೀರಿನ ಅಗತ್ಯವಿದ್ದು,ವಾರಬಂದಿ ಇಲ್ಲದೆ ಏಪ್ರಿಲ್ 10ರ ವರೆಗೆ ಕೃಷ್ಣಾ ಎಡದಂಡೆ ಕಾಲುವೆಗಳಿಗೆ ನೀರು ಹರಿಸಿದಲ್ಲಿ ಅನುಕೂಲವಾಗಲಿದೆ.ಆದ್ದರಿಂದ ಏಪ್ರಿಲ್ 10ರ ವರೆಗೆ ನೀರು ಹರಿಸಲು ಮನವಿ ಮಾಡಿದ್ದಾರೆ.
ಅಲ್ಲದೆ ನಗರದ ಹಸನಾಪುರ ಕ್ಯಾಂಪ್‍ಲ್ಲಿರುವ ಹೊಲಗಾಲುವೆ ವಿಭಾಗ ಸಂಖ್ಯೆ-2 ರ ಕಚೇರಿಯನ್ನು ಬಾಗಲಕೋಟೆಗೆ ಸ್ಥಳಾಂತರಕ್ಕೆ ಮುಂದಾಗಿರುವುದನ್ನು ಕೈಬಿಡಬೇಕು.ಈ ಕಚೇರೆಯಿಂದ ಸುರಪುರ ಶಹಾಪುರ ಜೇವರ್ಗಿ,ದೇವದುರ್ಗ,ವಡಗೇರಿ,ಯಾದಗಿರಿ ಸೇರಿದಂತೆ ಸುಮಾರು 8 ಸಾವಿರ ಹೆಕ್ಟರ್ ಹೊಲಗಳಿಗೆ ನೀರಾವರಿಗೆ ಸಂಬಂಧಿಸಿದಂತೆ ಈ ಕಚೇರಿ ಸಂಬಂಧಿಸಿದೆ.ಈಗ ಕಚೇರಿಯನ್ನು ಸ್ಥಳಾಂತರಿಸುವುದರಿಂದ ರೈತರಿಗೆ ತೊಂದರೆಯಾಗಲಿದೆ.ಆದ್ದರಿಂದ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬೇಡಿ ಎಂದು ಸಚಿವ ಗೋವಿಂದ ಕಾರಜೋಳ ಅವರಿಗೆ ಬರೆದ ಮನವಿಯಲ್ಲಿ ವಿನಂತಿಸಿದ್ದಾರೆ.